ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ನಿಗೂಢ ನಾಪತ್ತೆ

​ಮಂಜೇಶ್ವರ: ಮಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಯುವಕನೊಬ್ಬ ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೋಡಿಬೈಲು ಕೊಡಂಗೆ ನಿವಾಸಿ ಸಚಿನ್ ಕುಮಾರ್ (34) ನಾಪತ್ತೆಯಾದವರು.

​ಸಚಿನ್ ಕುಮಾರ್ 2024ರ ಮಾರ್ಚ್‌ನಲ್ಲಿ ಮಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರುತ್ತಿರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದಾರೆನ್ನಲಾಗಿದೆ. ಆದರೆ ನಂತರ ಅವರು ಮನೆಗೆ ಮರಳಿಲ್ಲ, ಅವರ ಮೊಬೈಲ್ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.

ಸೋದರಿ ಸಾರಿಕಾ ರೂಪರಾಜ್ ಶೆಟ್ಟಿ ಅವರು ಹಲವು ಬಾರಿ ಹುಡುಕಾಟ ನಡೆಸಿದರೂ ಫಲ ನೀಡಿಲ್ಲ. ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ವಿಚಾರಿಸಿದಾಗ ಸಚಿನ್ ಅಲ್ಲಿ ಕೆಲಸ ಬಿಟ್ಟಿರುವುದು ತಿಳಿದುಬಂದಿದೆ. ಈ ಕುರಿತು ಸಾರಿಕಾ ಅವರು ನೀಡಿದ ದೂರಿನ ಮೇರೆಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!