ದುರ್ಗಾ ಶಕ್ತಿ ಕುಣಿತ ಭಜನಾ ತಂಡದ ಆಶ್ರಯದಲ್ಲಿ ಕಾರ್ಯಕ್ರಮ
ಉಪ್ಪಳ, ಜೂನ್ 21: ದುರ್ಗಾ ಶಕ್ತಿ ಕುಣಿತ ಭಜನಾ ತಂಡ, ಪರಂಬಳ ಕಯ್ಯಾರು ಇದರ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಭಾರತ ಮಾತಾ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ವಿಶೇಷ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಮಂಜೇಶ್ವರ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ರಾಮಕೃಷ್ಣ ಸಂತಡ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ್ ಶೆಟ್ಟಿ ಹೇರೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಯೋಗ ಶಿಕ್ಷಕಿ ಕುಮಾರಿ ತೇಜಶ್ರೀ ಸಂತಡ್ಕ (ಫಿಸಿಯೋಥೆರಪಿ, ಮಂಗಳೂರು) ಅವರು ಯೋಗದ ಮಹತ್ವ ಹಾಗೂ ಆರೋಗ್ಯಕರ ಜೀವನದಲ್ಲಿ ಯೋಗದ ಪಾತ್ರದ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಯೋಗ ತರಬೇತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ರಾಮಕೃಷ್ಣ ಸಂತಡ್ಕ ಹಾಗೂ ಯೋಗ ಶಿಕ್ಷಕಿ ಕುಮಾರಿ ತೇಜಶ್ರೀ ಅವರನ್ನು ಅಭಿನಂದಿಸಲಾಯಿತು. ದುರ್ಗಾ ಶಕ್ತಿ ಕುಣಿತ ಭಜನಾ ತಂಡದ ಪ್ರಧಾನ ಸಂಚಾಲಕ ಶ್ರೀ ಸತೀಶ್ ಕುಮಾರ್ ಕಾಪು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಜನಾ ಸಂಚಾಲಕ ಮಂಜುನಾಥ ಪರಂಬಳ ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಜನಾ ಸಮಿತಿ ಸಂಚಾಲಕ ಸಂತೋಷ್ ಪೇರಿಯಪ್ಪಾಡಿ, ಸಂಚಾಲಕಿಯರಾದ ಜಯಲಕ್ಷ್ಮೀ ಪರಂಬಳ, ಹೇಮಲತಾ ಬೊಳಂಪಾಡಿ, ಜಯಲಕ್ಷ್ಮೀ ಹೆಬ್ಬಾರಮೂಲೆ ಹಾಗೂ ಸುಜಾತಾ ಕಯ್ಯಾರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 75 ವಿದ್ಯಾರ್ಥಿಗಳು ಭಾಗವಹಿಸಿ ಯೋಗ ಶಿಕ್ಷಣ ಪಡೆದರು.