ರಾಜಕೀಯ ಅಧಿಕಾರ ಗಳಿಸುವ ದುರುದ್ದೇಶದಿಂದ ಮತೀಯ ಶಕ್ತಿಗಳು ದೇಶದಲ್ಲಿ ಇನ್ನಿಲ್ಲದ ದ್ವೇಷದ ರಾಜಕಾರಣದಲ್ಲಿ ನಿರತವಾಗಿದ್ದು, ಈ ಶಕ್ತಿಗಳನ್ನು ಹಿಮ್ಮೆಟ್ಟಿಸಿ ದೇಶದಲ್ಲಿ ಜಾತ್ಯಾತೀತತೆ ಹಾಗೂ ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಪಕ್ಷವು ಪ್ರತಿಜ್ಞಾ ಬದ್ಧವಾಗಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ.
ಮಂಗಲ್ಪಾಡಿ ಮಂಡಲದ ಹದಿನೈದನೇ ಒಳಯಂ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ ಸಭೆ ಹಾಗೂ ಮಹಾತ್ಮಾ ಗಾಂಧಿ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಮುಹಮ್ಮದ್ ಮೇರ್ಕಳರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾರರಾದ ಬಾಬು ಬಂದ್ಯೋಡು, ಫಾರೂಕ್ ಶಿರಿಯ, ಮುಹಮ್ಮದ್ ಸೀಗಂಡಡಿ, ಅಶ್ರಫ್ ಮುಟ್ಟಂ, ಜಾವೇದ್ ಮುಟ್ಟಂ, ವಸಂತಿ, ಇಬ್ರಾಹಿಂ ಕೋಟಾ ಮುಂತಾದವರು ಉಪಸ್ಥಿತರಿದ್ದರು.
ಒಳಯಂ ವಾರ್ಡ್ ಕಾಂಗ್ರೆಸ್ ಸಮಿತಿಯನ್ನು ಈ ಕೆಳಗಿನಂತೆ ರೂಪಿಸಲಾಯಿತು.
ಮುಹಮ್ಮದ್ ಮೇರ್ಕಳ(ಅಧ್ಯಕ್ಷರು)
ಖಾದರ್ ಅಕ್ಕರೆ, ಲತೀಫ್ ಓಣಂದೆ(ಉಪಾಧ್ಯಕ್ಷರು), ಅಂದುಮಾನ್ ಶಿರಿಯ ಕುನ್ನಿಲ್ (ಪ್ರ. ಕಾರ್ಯದರ್ಶಿ) ಇಬ್ರಾಹಿಂ ಕೋಟಾ ,ಖಾದರ್ ಶಿರಿಯಾ ಕುನ್ನಿಲ್ (ಜೊತೆ ಕಾರ್ಯದರ್ಶಿಗಳು) ವಸಂತಿ ಶಿರಿಯ (ಖಜಾಂಚಿ) ಮೊಯ್ದಿನ್ ಕುಟ್ಟಿ, ಬೀಫಾತಿಮ ಕೋಟಾ, ತಸ್ಲೀಮಾ ಕೋಟ, ಅಶ್ರಫ್ ಮೊಯ್ದಿನ್ (ಕಾರ್ಯಕಾರಿ ಸಮಿತಿ ಸದಸ್ಯರು)