ಚಕ್ರವರ್ತಿ (ರಿ.) ಹೊಸಂಗಡಿ ಸಂಘದ ಮುಂದಿನ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಮಹಾಸಭೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಸುರೇಶ್ ಗಾಣಿಂಜಾಲ್, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಪೆಲಪ್ಪಾಡಿ, ಉಪಾಧ್ಯಕ್ಷರಾಗಿ ನರೇಂದ್ರ ಹೆಗಡೆ, ಕೋಶಾಧಿಕಾರಿಯಾಗಿ ಅಶೋಕ್ ಅಂಗಡಿಪದವು ಹಾಗೂ ಜೊತೆ ಕಾರ್ಯದರ್ಶಿಯಾಗಿ ಹರೀಶ್ ಶಕ್ತಿನಗರ್ ಅವರನ್ನು ಆಯ್ಕೆ ಮಾಡಲಾಗಿದೆ.

ಗೌರವ ಸಲಹೆಗಾರರಾಗಿ ಅನಿಲ್ ರಾಜ್ ಅಂಗಡಿಪದವು, ಹರೀಶ್ ಅಟ್ಲಾಸ್, ಜಯಂತ ಪೆಲಪ್ಪಾಡಿ, ದಿನೇಶ್ ಜೈನ್, ಹರೀಶ್ ಮಜಾಲ್ ಹಾಗೂ ಜನಾರ್ಧನ ಪೊಯ್ಯಕಂಡ ಅವರನ್ನು ನೇಮಿಸಲಾಗಿದೆ. ಕ್ರೀಡಾ ಕಾರ್ಯದರ್ಶಿಗಳಾಗಿ ಸತೀಶ್ ಶಕ್ತಿನಗರ ಮತ್ತು ಸಂದೀಪ್ ಪೆಲಪ್ಪಾಡಿ ಆಯ್ಕೆಯಾಗಿದ್ದಾರೆ. ಲೆಕ್ಕಪರಿಶೋಧಕರಾಗಿ ಪ್ರದೀಪ್ ಶ್ರೀ ರಾಮ್ ಅವರನ್ನು ನೇಮಿಸಲಾಗಿದೆ. ಮಹಾಸಭೆಯು ಶಿವಪ್ರಸಾದ್ ಪೆಲಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಸ್ವಾಗತವನ್ನು ಸುರೇಶ್ ಗಾಣಿಂಜಾಲ್ ನಿರ್ವಹಿಸಿದರೆ, ವಂದನೆಯನ್ನು ಹರೀಶ್ ಶಕ್ತಿನಗರ ಸಲ್ಲಿಸಿದರು.


