ಇಚ್ಲಂಗೋಡಿನಲ್ಲಿ 2027ರ ಜನವರಿಯಲ್ಲಿ ಗೃಹಪ್ರವೇಶ; ಕೈಕಂಬದಲ್ಲಿ ನಡೆದ ಕಾರ್ಯಕ್ರಮಕ್ಕೆ ಗಣ್ಯರ ಸಮ್ಮುಖ
ಇಚ್ಲಂಗೋಡು, ಜು. 2: ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನ, ಇಚ್ಲಂಗೋಡು ಕುಟುಂಬಸ್ಥರ ಅರೆಕೆರೆ ಬೈಲು ತರವಾಡು ಮನೆಯ ಗೃಹಪ್ರವೇಶವು 2027ರ ಜನವರಿಯಲ್ಲಿ ನಡೆಯಲಿದ್ದು, ಅದರ ಅಂಗವಾಗಿ ವಿಜ್ಞಾಪನಾ ಪತ್ರ ಹಾಗೂ ಲಕ್ಕಿ ಕೂಪನ್ ಬಿಡುಗಡೆ ಕಾರ್ಯಕ್ರಮವು ಕೈಕಂಬದ ಪಂಚಮಿ ಹಾಲ್ನಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಕುಬನೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಹಾಗೂ ಕಾರ್ನವರ ಒಕ್ಕೂಟದ ಅಧ್ಯಕ್ಷ ಗಣೇಶ್ ಮಂಗಳೂರು ಉದ್ಘಾಟಿಸಿದರು.
ಬಡಾಜೆ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸುಕುಮಾರ ಮಂಗಲ್ಪಾಡಿ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿದರು. ಸಾಮಾಜಿಕ ಹಾಗೂ ಧಾರ್ಮಿಕ ಯುವ ಮುಖಂಡ ಮಂಜು ಕಾರ್ಲೆ ಲಕ್ಕಿ ಕೂಪನ್ ಬಿಡುಗಡೆಗೊಳಿಸಿದರು.



ಕಾರ್ಯಕ್ರಮದಲ್ಲಿ ಹಿರಿಯರಾದ ಸುಧಾಕರ ಅಂಗಡಿಪದವು, ರಾಜು ಮಂಜೇಶ್ವರ, ನೇಮು ಅಂಗಡಿಪದವು, ರಾಜು ಇಚ್ಲಂಗೋಡು, ಆಡಳಿತ ಸಮಿತಿಯ ಅಧ್ಯಕ್ಷ ಪರಮೇಶ್ವರ ಅತ್ತಾವರ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಆನಂದ ಅಡ್ಕತ್ತಬೈಲ್, ಸೀತಾರಾಮ ಅಂಗಡಿಪದವು, ಮಹಿಳಾ ಸಮಿತಿಯ ಅಧ್ಯಕ್ಷೆ ಸಜಿನಿ ಸೋಂಕಾಲ್ ಹಾಗೂ ಪದಾಧಿಕಾರಿಗಳಾದ ಭಾಸ್ಕರ ಮೊಗ್ರಾಲ್ ಪುತ್ತೂರು, ತುಳಸಿದಾಸ್ ಮಂಜೇಶ್ವರ, ರೋಹಿತ್ ಪಾಂಡೇಶ್ವರ, ಜಿತೇಂದ್ರ ಕುಂಜತ್ತೂರು, ರೀನಾ ಮಂಗಲ್ಪಾಡಿ, ಧನುಷ್ ಪೊಯ್ಯಕಂಡ, ಗಣೇಶ್ ಆರಿಕ್ಕಾಡಿ, ರಘು ಬಂಬ್ರಾಣ, ಶಿವಪ್ರಸಾದ್ ಸೋಂಕಾಲ್, ರವಿ ಇಚ್ಲಂಗೋಡು, ಅಶೋಕ್ ಮೊಗ್ರಾಲ್ ಪುತ್ತೂರು, ಶ್ರೀಜ ಆರಿಕ್ಕಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಿತಿ ಸಂಚಾಲಕ ರಾಜೇಶ್ ಕೊಡ್ಲಮೊಗರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


