11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ನಿವೃತ್ತ ಪೊಲೀಸ್ ಸಿಬ್ಬಂದಿ ಬಂಧನ

ಕಾಸರಗೋಡು:
ಆಟವಾಡಲು ಹೋದ ಹನ್ನೊಂದರ ಬಾಲಕಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನೀಡಿದ ಘಟನೆ ವರದಿ. ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಪೊಲೀಸ್ ನೌಕರನನ್ನು ಪೋಕ್ಸೋ ಕೇಸು ದಾಖಲಿಸಿ ಬಂಧಿಸಲಾಗಿದೆ.

ಪಯ್ಯನ್ನೂರಿನ ಕಾಪುಮ್ಮೇಲ್ ಇಳಯಡತ್ತ್ ನಿವಾಸಿ ಇ. ವಿ. ಗೋಪಿನಾಥ್ (62) ಬಂಧಿತ ವ್ಯಕ್ತಿ. ಪರಿಯಾರಂ ಪೊಲೀಸ್ ಇನ್ಸ್ಪೆಕ್ಟರ್ ಕೆ. ಪಿ. ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಬಂಧಿತ ವ್ಯಕ್ತಿಯು ಸುದೀರ್ಘ ಕಾಲ ಪೊಲೀಸ್ ಇಲಾಖೆಯಲ್ಲಿ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದನು.
ಬುಧವಾರ ಮಧ್ಯಾಹ್ನ ಈ ಅಮಾನುಷ ಕೃತ್ಯ ನಡೆದಿದೆ . ಮಳೆಯಿಂದಾಗಿ ಶಾಲೆಗೆ ರಜೆಯಾಗಿದ್ದ ಕಾರಣ ಬಾಲಕಿ ಮನೆ ಪರಿಸರದಲ್ಲೇ ಆಟವಾಡಲೆಂದು ಹೋಗಿದ್ದ ವೇಳೆ ಮದ್ಯದ ಅಮಲಿನಲ್ಲಿ ಸ್ಥಳಕ್ಕೆ ಬಂದ ನಿವೃತ್ತ ಪೊಲೀಸ್ ಬಾಲಕಿಯನ್ನು ತಂತ್ರಪೂರ್ವಕ, ಬಲವಂತದಿಂದ ಪಕ್ಕದಲ್ಲಿರುವ ತನ್ನ ಮನೆಗೆ ಕೊಂಡೊಯ್ದ ದೌರ್ಜನ್ಯ ನಡೆಸಿದ್ದಾನೆ.

ಆಟವಾಡಲು ಮನೆಯಿಂದ ಹೊರಗೆ ಹೋದ ವಿದ್ಯಾರ್ಥಿನಿ ಕಾಣೆಯಾದ ಹಿನ್ನೆಲೆಯಲ್ಲಿ ಮನೆಯವರು ಆತಂಕಗೊಂಡು ಹುಡುಕಾಡಲು ಆರಂಭಿಸಿದ್ದರು. ಈ ನಿವೃತ್ತ ಪೊಲೀಸ್ ಮನೆಯಿಂದ ಬಾಲಕಿ ಪತ್ತೆಯಾದರೂ ಮೊದಲಿಗೆ ಭಯದಿಂದ ಏನನ್ನೂ ಹೇಳಿರಲಿಲ್ಲ. ಬಳಿಕ ವಿಚಾರಿಸಿದಾಗ ನಿವೃತ್ತ ಪೋಲೀಸನಿಂದ ಅನುಭವಿಸಿದ ದೌರ್ಜನ್ಯವನ್ನು
ಬಹಿರಂಗ ಪಡಿಸಿದಳು. ಕೂಡಲೇ ನಾಗರಿಕರು ಆತನ ಮನೆಗೆ ಸುತ್ತುವರಿದು ದಿಗ್ಬಂಧನ ಹಾಕಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ . ಈತನನ್ನು ಪೊಲೀಸರು ಬಂಧಿಸಿ ಕೊಂಡೊಯ್ಯವ ವೇಳೆ ನಾಗರಿಕರು ಅವಾಚ್ಯ ಶಬ್ದಗಳಿಂದ ಬೖದು ಕೂಗಾಡಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕಾಯ್ದೆಗಳನ್ನು ಹಾಕುವುದಾಗಿ ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!