ಸೀತಾಂಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೀತಾಂಗೋಳಿ ಕಾರ್ಯಕ್ಷೇತ್ರದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಕುದ್ರೆಪ್ಪಾಡಿಯ ರಚನಾ ಕ್ಲಬ್ನಲ್ಲಿ ನಡೆಯಿತು.

ಕಾರ್ಯಕ್ಷೇತ್ರದ ನೂತನ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ಮುಗುಮೇರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಶ್ರೀ ಪ್ರದೀಪ್ ಮುಂಡಾನ್ ತಡ್ಕ, ಕಾರ್ಯದರ್ಶಿಯಾಗಿ ಶ್ರೀಮತಿ ಧನ್ಯಶ್ರೀ, ಜಂಟಿ ಕಾರ್ಯದರ್ಶಿಯಾಗಿ ಶ್ರೀಮತಿ ಪವಿತ್ರಾ ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ಸರಿತಾ ಆಯ್ಕೆಯಾದರು. ದಾಖಲೆ ಸಮಿತಿ ಸದಸ್ಯರಾಗಿ ಶ್ರೀ ಕಿರಣ್, ಶ್ರೀಮತಿ ಪಲ್ಲವಿ, ಶ್ರೀಮತಿ ಸರಿತಾ ಹಾಗೂ ಶ್ರೀಮತಿ ಶಾರದಾ ಆಯ್ಕೆಯಾದರು.



ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ಶ್ರೀ ಗೋಪಾಲಕೃಷ್ಣ, ಸೀತಾಂಗೋಳಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶ್ರೀಮತಿ ಅಶ್ವಿನಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಶ್ರೀಮತಿ ಸರಿತಾ ಸ್ವಾಗತಿಸಿ, ಶ್ರೀಮತಿ ಶಶಿಕಲಾ ಪೆರಡಾನಮೂಲೆ ವಂದಿಸಿದರು.


