ತ್ರಿಸ್ತರ ಸ್ಥಳೀಯಾಡಳಿತ ಚುನಾವಣೆ : ಅಗೋಸ್ಟ್ 30 ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ

ಕಾಸರಗೋಡು: ಮುಂಬರುವ ಸ್ಥಳೀಯಾಡಳಿತ ಚುನಾವಣೆಯ ಮತದಾರರ ಅಂತಿಮ ಪಟ್ಟಿ ಅಗೋಸ್ಟ್ 30 ಕ್ಕೆ ಪ್ರಕಟಗೊಳ್ಳಲಿದೆ.ಈಗಾಗಲೇ ಪೂರ್ವ ಭಾವಿ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದೆ.

1034 ಸ್ಥಳೀಯಾಡಳಿತ ಸಂಸ್ಥೆಗಳ 20,998 ವಾರ್ಡುಗಳಲ್ಲಿ ಒಟ್ಟು 2,66,78,256 ಮತದಾರರಿದ್ದಾರೆ. ಈಪೈಕಿ 1,26,32,186 ಮಂದಿ ಪುರುಷರು , 1,40,45,837ಮಂದಿ ಮಹಿಳೆಯರಾಗಿದ್ದಾರೆ. 233ಮಂದಿ ಟ್ರಾನ್ಸ್ಜೆಂಡರ್ಸ್ ಇದ್ದಾರೆ. ಆಗಸ್ಟ್ 7ರ ತನಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇದೆ. 2025 ಜನವರಿ 1ರೊಳಗೆ 18ವಯಸ್ಸು ಪೂರ್ಣಗೊಂಡವರನ್ನು ಮತದಾರರ ಯಾದಿಗೆ ಸೇರಿಸಲಾಗುತ್ತಿದೆ.

ಅಂತಿಮ ಮತದಾರರ ಪಟ್ಟಿ ಆಗಸ್ಟ್ 30ರಂದು ಪ್ರಕಟವಾಗಲಿದೆ.ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ಅಳಿಸುವಿಕೆ, ಸ್ಥಳ ಬದಲಾವಣೆ ಆವಶ್ಯ ಇರುವವರು sec. Kerala. gov.in ಎಂಬ ವೆಬ್ಸೈಟಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಕಟಿಸಲಾಗಿದೆ.
ಬಳಿಕ ಅರ್ಜೀದಾರರು ಹಿಯರಿಂಗ್ ಗೆ ಖುದ್ದು ಹಾಜರಾಗಬೇಕು. ಸ್ಥಳೀಯಿಡಳಿತ ಸಂಸ್ಥೆಗಳಲ್ಲಿ ಈ ಕುರಿತಾದ ಮಾಹಿತಿ ಲಭ್ಯವಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!