ಚಿರಂಜೀವಿ (ರಿ ) ಕುಂಬಳೆ :- ಕುಂಬಳೆ ಚಿರಂಜೀವಿ ಸಂಸ್ಥೆಯಲ್ಲಿ ಆಗಸ್ಟ್ 15ರಂದು 80ನೇ ವರ್ಷದ ಸ್ವಾತಂತ್ರ್ಯದ ದಿನವನ್ನು ಬಹಳ ವೆಶೇಷ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.


ಸಂಸ್ಥೆಯ ಎಲ್ಲಾ ಸದಸ್ಯರು ಮಹಿಳಾ ಪದಾಧಿಕಾರಿಗಳು ಸೇರಿ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಧ್ವಜಾರೋಹಣಗೊಳಿಸಿದರು. ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರಾಗಿರುವ ಶ್ರೀ ಪೃಥ್ವಿರಾಜ್ ಜಗನಾಥ್ ಶೆಟ್ಟಿ, ಕುಂಬಳೆ ಪಂಚಾಯತ್ ಸದಸ್ಯರಾದ ಶ್ರೀ ರಮೇಶ್ ಭಟ್ಟ್, ಉದ್ಯಮಿ ಶ್ರೀಯುತ ನಾರಾಯಣ ಪ್ರಭು ಸತೀಶ್ ನಾಯ್ಕ್ ಸೆರ್ವೆವರ್ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಪಾಲ್ಗೊಂಡರು.


ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಾಗಿರುವ ಹಾಗೂ ಸಾಮಾಜಿಕವಾಗಿ ಚಿಂತಿಸಿ ಗಡಿ ನಾಡಿನ ಶಾಲಾ ಮಕ್ಕಳಿಗೆ ಉಚಿತ ಪ್ರಯಾಣ ಮಾಡಲು ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿ ಜಾರಿಗೆ ತರಲು ಪ್ರಯತ್ನ ಮಾಡಿದ ಕುಂಬಳೆ ಕಾಂಗ್ರೆಸ್ ಮಂಡಲ ಅಧ್ಯಕ್ಷರು ಆಗಿರಿವ ಶ್ರೀ ರವಿ ಪೂಜಾರಿ ಇವರನ್ನು ಉದ್ಯಮಿ ಶ್ರೀ ನಾರಾಯಣ ಪ್ರಭು ಗೌರವಿಸಿ ಸನ್ಮಾನಿಸಿದರು.


ಅದೇ ರೀತಿ ಸಾಮಾಜಿಕ ಕಳಕಳಿ ಹೊಂದಿರುವ ಚಿರಂಜೀವಿ ಕ್ಲಬ್ಬಿನ ವತಿಯಿಂದ ಕುಂಬಳೆಯ ಸಮೀಪ ನಾಯಕ್ಸ್ ಜ೦ಕ್ಷನಿನ 4 ರಸ್ತೆಗಳು ಸೇರುವಲ್ಲಿ ಚಾಲಕರಿಗೆ ನೇರವಾಗುವಂತೆ ಕನ್ವಕ್ಸ್ ಮಿರರ್ ಅಳವಡಿಸಿದರು. ಇದನ್ನು ಸ್ವಾತಂತ್ರದ ದಿನ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರಾದ ಪೃಥ್ವಿರಾಜ್ ಜಗನ್ನಾಥ್ ಶೆಟ್ಟಿ ಉದ್ಘಾಟನೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಚಿರಂಜೀವಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಗಟ್ಟಿ, ಉಪಾಧ್ಯಕ್ಷರಾದ ಕೆ ಸಿ. ಮೋಹನ್, ಕಾರ್ಯದರ್ಶಿ ಶ್ರೀ ಕೃಷ್ಣ ಕುಂಬಳೆ , ಜೊತೆ ಕಾರ್ಯದರ್ಶಿಗಳಾದ ಪ್ರಣವ್ ಭoಡಾರಿ ಕರ್ಲೆ, ಕಿರಣ್ ಪೂಜಾರಿ, ಕೋಶಾಧಿಕಾರಿ ಗೋಪಿ, ಸಂತೋಷ ಕುಂಬಳೆ, ದೀಪಕ್ ಕೃಷ್ಣನಗರ, ನವೀನ್, ರತ್ನಕರ ರೈ ಕುಂಡಾಪು, ರವಿ ನೈಕಪ್, ರಾಜಮನಿ ಸೂರಂಬೈಲ್, ವಿನಯ್ ಕುಮಾರ್, ಸತೀಶ್ ಶಾಂತಿಪಳ್ಳ, ವಿಜಯ್ ಕುಮಾರ್ ಮೊಗ್ರಲ್, ವೈಶಾಕ್, ನಾರಾಯಣ ಪೂಜಾರಿ ವಿಶ್ವನಾಥ್ ಬಂಡಾರಿ, ಸಂಜೀವ ಅಮೀನ್,ಮಹೇಶ್ವರಣ್, ರಾಜೇಶ್ ದೇವಿನಗರ, ಪ್ರದೀಪ್ ಕೃಷ್ಣನಗರ, ವಿನೋದ್ ಮಲಂಗಾರ, ಅಶೋಕ್ ಅಜ್ಜಿಗೋಳಿ ಭಾಗವಹಿಸಿದರು. ಅದೇ ರೀತಿ ಮಹಿಳಾ ಸದಸ್ಯರಾದ ನಳಿನಿ ಕೋಟೆಕಾರ್, ಮಮತ ಕುಲಾಲ್, ಜಾಲಜಾಕ್ಷಿ, ಮಾಲತಿ, ತನ್ವಿ ಕೆ ಕೋಟೆಕಾರ್ ಇತರ ಎಲ್ಲಾ ಸದಸ್ಯರು ಪಾಲ್ಗೊಂಡರು, ಕಾರ್ಯದರ್ಶಿ ಕೃಷ್ಣ ಕುಂಬಳೆ ಸ್ವಾಗತಗೊಳಿಸಿ, ಪ್ರಜೇಶ್ ಗಟ್ಟಿ ಪೆರ್ವಾಡ್ ವಂದಿಸಿದರು.



