ಕಾಸರಗೋಡು : ಜಿಲ್ಲೆಯ ನೀಲೇಶ್ವರ ಸಮೀಪ ಪಾತ್ರೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಹೊಳೆಗೆ ಬಿದ್ದು ಗೃಹಿಣಿ ನಾಪತ್ತೆಯಾಗಿದ್ದಾರೆ.

ಕಣಿಚ್ಚಿರ ನಿವಾಸಿ ಆಟೋಚಾಲಕ ಅಜಿತ್ ಅವರ ಪತ್ನಿ ನದಿಯ (48) ನಾಪತ್ತೆಯಾದ ದುರ್ದೈವಿ.

ಬುಧವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮನೆ ಹತ್ತಿರದ ಹೊಳೆ ಬದಿಯಲ್ಲಿ ಈ ಅಪಘಾತ ಸಂಭವಿಸಿದೆ. ನದಿಯವರು ಪಾತ್ರೆ ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಈ ಅನಾಹುತ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳದ ದಡದಲ್ಲಿ ಇವರ ಮೊಬೈಲ್ ಫೋನ್ ಪತ್ತೆಯಾಗಿದೆ.
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಪರಿಣಿತ ಸ್ಕೂಬಾ ತಂಡ, ನೀಲೇಶ್ವರ ಪೊಲೀಸರು ಹಾಗೂ ಸ್ಥಳೀಯ ಸಾರ್ವಜನಿಕರು ಸೇರಿ ಹೊಳೆಯಲ್ಲಿ ನಾಪತ್ತೆಯಾದ ಮಹಿಳೆಗಾಗಿ ತೀವ್ರ ಹುಡುಕಾಟ ಮುಂದುವರಿಸಿದ್ದಾರೆ.

