ಕೊಂಡೆವೂರು ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ.ಶಾಸ್ತ್ರ ಮತ್ತು ಶಸ್ತ್ರ ಕ್ಕೆ ಅವಿನಾಭಾವ ಸಂಬಂಧ ಇದೆ :ಅಜಿತ್ ಹನುಮಕ್ಕ ನವರ್

ಉಪ್ಪಳ :ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ವನ್ನು ಆಚರಿಸಲಾಯಿತು . ಕಾರ್ಯಕ್ರಮವನ್ನು ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿ ಆಶೀರ್ವಚನ ನೀಡಿದರು.ಈ ಸಂಧರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕ ನವರು ಮುಖ್ಯ ಭಾಷಣ ಮಾಡುತ್ತಾ ಭಾರತೀಯ ಸೇನೆ ಪ್ರಪಂಚದ ಅತ್ಯುನ್ನತ ನೈತಿಕತೆಯ ಸೇನೆಯಾಗಿದ್ದು ನಾವೆಲ್ಲಾ ಸುರಕ್ಷಿತ ವಾಗಿರುವುದಕ್ಕೆ ಭಾರತೀಯ ಯೋಧರ ನಿಷ್ಕಳಂಕ ಸೇವೆಯೇ ಕಾರಣವೆಂದರು.

ನಮ್ಮ ದೇಶದಲ್ಲಿ ಶಾಸ್ತ್ರ ಮತ್ತು ಶಸ್ತ್ರವು ಅವಿನಾಭಾವ ಸಂಬಂಧ ಹೊಂದಿದ್ದು,ಈ ನಿಟ್ಟಿನಲ್ಲಿ ಕೊಂಡೆವೂರು ಆಶ್ರಮದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಇದು ಇತಿಹಾಸದೊಂದಿಗೆ ಬೆರೆಯುತ್ತದೆ.ಎಂದರು.ಅಂದು ಪಾಕಿಸ್ತಾನ ಅಕ್ರಮ ನುಸುಳು ಕೋರರಿಗೆ ತಕ್ಕ ಪಾಠ ಕಳಿಸಿದ ಭಾರತೀಯ ಸೇನೆ ತನ್ನ ಶೌರ್ಯ ವನ್ನು ಎದೆಯಲ್ಲಿಟ್ಟು ಹೋರಾಡಿದ ಕಾರಣ ಅಂದಿನ ವಿಜಯ ನಮ್ಮದಾಯಿತು.ಕಾರ್ಗಿಲ್ ವಿಜಯವು ಶೌರ್ಯದ ಸಂಕೇತವಾಗಿದೆಯೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕಾರ್ಗಿಲ್ ಯುದ್ಧ ವೀರ ಹವಲ್ದಾರ್ ಜಾನಿ ಮಾಥು ರಾಜಪುರಂ ಉಪಸ್ಥಿತರಿದ್ದರು., ಬ್ರಿಗೇಡಿಯರ್ ಐ.ಎನ್.ರೈ ಕುಂಬಳೆ, ಕಮಾಂಡರ್ ಕೆ.ವಿಜಯಕುಮಾ‌ರ್ ಕಣ್ಣತೀರ್ಥ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಂಗಳೂರು, ಸುಕೇಶ್ ಹೆಗ್ಗಡೆ ಬೆಂಗಳೂರು,ಸದಾಶಿವ ಶೆಟ್ಟಿ ಕನ್ಯಾನ ಎಂಬಿವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವೀರ ಯೋಧರನ್ನು ಸ್ಮರಿಸುವ ನೃತ್ಯ ರೂಪಕ ನಡೆಯಿತು .ಕಾಸರಗೋಡು ಸರಕಾರಿ ಕಾಲೇಜಿನ NSS ವಿದ್ಯಾರ್ಥಿಗಳಿಂದ ವೀರ ಯೋಧರಿಗೆ ಗೌರವ ರಕ್ಷೆ ನಡೆಯಿತು.ಅಶೋಕ್ ಮಾಸ್ಟರ್ ಬಾಡೂರು ಸ್ವಾಗತಿಸಿದರು .ಗಂಗಾಧರ ಹೊಸಂಗಡಿ ವಂದನಾರ್ಪಣಾಗೆಯ್ದರು.ದಿನಕರ ಹೊಸಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ವೀರ ಹವಲ್ದಾರ್ ಜಾನಿ ಮಾಥು ರಾಜಪುರಂ ಅವರನ್ನು ಸನ್ಮಾನಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!