ಕಾಸರಗೋಡು: ಓಣಂ ಆಚರಣೆ ನೋಡಲು ತೆರಳಿದ್ದ ವೇಳೆ ಆವರಣ ಗೋಡೆಯಿಲ್ಲದ ಪಾಳುಬಾವಿಗೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.


ಕೊಡಕ್ಕಾಡ್ ಆನಿಕಾಡಿ ನಿವಾಸಿ ಧನೇಶ್-ಸವಿತಾ ದಂಪತಿ ಪುತ್ರ ಸನೂಪ್ ಸಾವನ್ನಪ್ಪಿದ ದುರ್ದೈವಿ. ಈತ ತಿಮಿರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದನು.

ಗುರುವಾರ ರಾತ್ರಿ ಚೆಂಬ್ರಕಾನಂನಲ್ಲಿ ನಡೆದ ಓಣಂ ಕಾರ್ಯಕ್ರಮಕ್ಕೆ ತೆರಳಿದ್ದ ಸನೂಪ್, ಸ್ನೇಹಿತರೊಂದಿಗೆ ಮೂತ್ರ ವಿಸರ್ಜನೆಗೆ ಹೋದಾಗ ಕತ್ತಲಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ಸ್ಥಳೀಯರು ರಕ್ಷಣೆಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಅಗ್ನಿಶಾಮಕ ದಳ ಸಿಪಿಆರ್ ನೀಡಿ ಆಸ್ಪತ್ರೆಗೆ ದಾಖಲಿಸಿದರೂ, ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಬಾಲಕ ಕೊನೆಯುಸಿರೆಳೆದಿದ್ದಾನೆ.

