ಕಾಸರಗೋಡು : ಬದಿಯಡ್ಕ ಸಮೀಪದ ಉಕ್ಕಿನಡ್ಕದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಯುವಕನನ್ನು ಅಪಹರಿಸಿ ನಗ್ನ ವೀಡಿಯೋ ಚಿತ್ರೀಕರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಲಾಗಿದೆ.

ದಕ್ಷಿಣ ಕನ್ನಡದ ವಿಟ್ಲ ಸೇರಾಜೆ ನಿವಾಸಿ ಎ.ಎಸ್. ಸುಜಿತ್ ಎಂಬವರನ್ನು ಆಗಸ್ಟ್ 29ರಂದು 5 ಜನರ ತಂಡವೊಂದು ಬೆತ್ತ ತೋರಿಸಿ ಕಾರಿನಲ್ಲಿ ಅಪಹರಿಸಿತ್ತು.
ಬಳಿಕ ಚೆರ್ಕಳದ ಕ್ವಾರ್ಟರ್ಸ್ ಒಂದರಲ್ಲಿ ಕೊಠಡಿಯಲ್ಲಿ ಕೂಡಿಹಾಕಿ, ಅಪ್ರಾಪ್ತ ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ ವೀಡಿಯೋ ಮಾಡಿಕೊಳ್ಳಲಾಗಿದೆ. “ಹಣ ನೀಡದಿದ್ದರೆ ಪೋಕ್ಸೋ ಕೇಸಿನಲ್ಲಿ ಸಿಲುಕಿಸಿ ಕೊಲೆ ಮಾಡುತ್ತೇವೆ” ಎಂದು ಬೆದರಿಸಿ 1,02,000 ರೂಪಾಯಿ ದೋಚಿದ್ದಾರೆಂದು ದೂರಲಾಗಿದೆ.

ಸುಜಿತ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಐವರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

