ಕಾಸರಗೋಡು: 2010ರಲ್ಲಿ ನಡೆದ ತೀಕ್ಷ್ಣ ಕೊಲೆ ಪ್ರಕರಣದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಉಪ್ಪಳದಲ್ಲಿ ಕಣ್ಣೂರು ಸಿಟಿ ಪೊಲೀಸರ ವಿಶೇಷ ಪಡೆ ಬಂಧಿಸಿದೆ.ವಾಳಯಿಲ್ ಮುಹಮ್ಮದ್ ಅಲಿ (55) ಬಂಧಿತ ಆರೋಪಿ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಳಿಯ ಮುಹಮ್ಮದ್ ಅಲಿ, ಬಾಮೈದರಾದ ಜಲಾಲ್ ಹಾಗೂ ಶಂಸೀರ್ಗೆ ಚೂರಿಯಿಂದ ಇರಿದಿದ್ದನು. ಗಂಭೀರ ಗಾಯಗೊಂಡಿದ್ದ ಜಲಾಲ್ ಸಾವನ್ನದ್ದರೆ, ಶಂಸೀರ್ ಚೇತರಿಸಿಕೊಂಡಿದ್ದರು.

ಈ ಘಟನೆಗೆ ಸಂಬಂಧಿಸಿ ವಳಪಟ್ಟಣಂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ, ಜಾಮೀನಿನಲ್ಲಿ ಹೊರಬಂದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಕೇರಳ ಮತ್ತು ಕರ್ನಾಟಕದ ವಿವಿಧೆಡೆ ಬೀದಿ ಬದಿ ವ್ಯಾಪಾರಿ ಹಾಗೂ ಅಡುಗೆ ಕೆಲಸಗಾರನಾಗಿ ತಲೆಮರೆಸಿಕೊಂಡಿದ್ದ ಈತನನ್ನು ಡಿಐಜಿ ಕೆ. ಕಾರ್ತಿಕ್ ನೇತೃತ್ವದ ‘ಆಪರೇಷನ್ ಗ್ರಿಪ್’ ಕಾರ್ಯಾಚರಣೆಯಡಿ ಅಂತಿಮವಾಗಿ ಸೆರೆಹಿಡಿಯಲಾಗಿದೆ.



I’ve tried a few different platforms lately but this one stands out for its reliability. The registration process was a breeze. Check out idsampan303 for a great experience.