ಕುಂಬಳೆ ಅನಂತಪುರ ಆಯಿಲ್ ಫ್ಯಾಕ್ಟರಿ ಬಂದ್‌ಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ

ಸ್ಥಳೀಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದ ಕುಂಬಳೆ ಅನಂತಪುರದ ವಿವಾದಿತ ಆಯಿಲ್ ಫ್ಯಾಕ್ಟರಿಯನ್ನು ತಕ್ಷಣವೇ ಮುಚ್ಚುವಂತೆ ಜಿಲ್ಲಾಧಿಕಾರಿ ಪುನಃ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

​ಕಾರ್ಖಾನೆಯಿಂದ ಹೊರಹೊಮ್ಮುವ ತೀವ್ರ ದುರ್ಗಂಧ ಮತ್ತು ರಾಸಾಯನಿಕಯುಕ್ತ ಮಲಿನ ಜಲ ಸಮೀಪದ ಮನೆಗಳ ಬಾವಿ ನೀರನ್ನು ಕಲುಷಿತಗೊಳಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಲುಷಿತ ವಾತಾವರಣದಿಂದಾಗಿ ಮಕ್ಕಳು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿತ್ತು.

​ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸದ ಮಾಲೀಕರ ಬೇಜವಾಬ್ದಾರಿಯನ್ನು ತನಿಖೆಯಲ್ಲಿ ಖಚಿತಪಡಿಸಿಕೊಂಡ ಜಿಲ್ಲಾಡಳಿತ, ಜನಹಿತಕ್ಕಾಗಿ ಈ ಕಠಿಣ ನಿರ್ಧಾರ ಕೈಗೊಂಡಿದೆ. ಪರಿಸರ ಕ್ರಿಯಾ ಸಮಿತಿ ಮತ್ತು ನಿವಾಸಿಗಳ ಸುದೀರ್ಘ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!