ಕಾಸರಗೋಡು: ಪತ್ನಿ ಆತ್ಮಹತ್ಯೆ ಮಾಡಿಕೊಂಡ ದುಃಖದಲ್ಲಿದ್ದ ಪತಿಯೊಬ್ಬರು ತಾನೂ ನೇಣು ಬಿಗಿದುಕೊಂಡು ಜೀವತ್ಯಾಗ ಮಾಡಿದ ದಾರುಣ ಘಟನೆ ವೆಳ್ಳರಿಕುಂಡು ಪೊಲೀಸ್ ಠಾಣಾ ವ್ಯಾಪ್ತಿಯ ಪರಪ್ಪ, ಬಿರಿಕ್ಕುಲಂನ ಕುರುಂಬಾಯಿ ಬಳಿ ಸಂಭವಿಸಿದೆ.ರೈತರಾಗಿದ್ದ ಕೆ. ಪವಿತ್ರನ್ (58) ಸಾವನ್ನಪ್ಪಿದ ದುರ್ದೈವಿ.

ಗುರುವಾರ ರಾತ್ರಿ 10:30 ರ ಸುಮಾರಿಗೆ ಅವರು ತಮ್ಮ ಮಲಗುವ ಕೋಣೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಲಸಕ್ಕೆ ಹೋಗಿದ್ದ ಮಗ ಮನೆಗೆ ಹಿಂತಿರುಗಿದಾಗ ಈ ದುರಂತ ಬೆಳಕಿಗೆ ಬಂದಿದೆ.ವಿಷಾದಕರ ಸಂಗತಿಯೆಂದರೆ, ಪವಿತ್ರನ್ ಅವರ ಪತ್ನಿ ಗೀತಾ ಅವರು ಆಗಸ್ಟ್ 14 ರಂದು ಇದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ವೆಳ್ಳರಿಕುಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




Super impressed with the fast withdrawals. No more waiting for days to get my winnings. br49bet is truly a gem.