ಕೊಡಿಯಮ್ಮೆ ನುಸ್ರತುಲ್ ಇಸ್ಲಾಂ ಸಂಘದ 24ನೇ ವಾರ್ಷಿಕೋತ್ಸವ; ಸೆ.11ರಿಂದ ಮೀಲಾದ್ ಮೆಹ್ಫಿಲ್

ಕುಂಬಳೆ : ಕೊಡಿಯಮ್ಮೆ ನುಸ್ರತುಲ್ ಇಸ್ಲಾಂ ಸಂಘದ 24ನೇ ವಾರ್ಷಿಕೋತ್ಸವದ ಅಂಗವಾಗಿ ಸೆಪ್ಟೆಂಬರ್ 11, 12 ಮತ್ತು 13ರಂದು ತ್ವಾಹಾ ನಗರ ಕೊಡಿಯಮ್ಮೆ ಯಲ್ಲಿ ಮೀಲಾದ್ ರ‍್ಯಾಲಿ ಹಾಗೂ ಮೀಲಾದ್ ಮೆಹ್ಫಿಲ್ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮೂರನೇ ಮರ್ಹೂಂ ಹಾಜಿ ಕೆ. ಹಂಝ ಉಸ್ತಾದ್ ಪ್ರಶಸ್ತಿ ಪ್ರದಾನವೂ ನಡೆಯಲಿದೆ.

ಸೆಪ್ಟೆಂಬರ್ 11ರಂದು ಜುಮಾ ನಮಾಝ್ ಬಳಿಕ ಮಖಾಂ ಸಿಯಾರತ್ ಹಾಗೂ ಸಂಜೆ 4 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಸೆಪ್ಟೆಂಬರ್ 12ರಂದು ಅಸರ್ ನಮಾಝ್ ಬಳಿಕ 25 ಮದರಸಗಳ ವಿದ್ಯಾರ್ಥಿಗಳು ಭಾಗವಹಿಸುವ ಸ್ಕೌಟ್ ಆ್ಯಂಡ್ ಫ್ಲವರ್ ಶೋನೊಂದಿಗೆ ಮೀಲಾದ್ ಸಂದೇಶ ರ‍್ಯಾಲಿ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ನಡೆಯುವ ಉದ್ಘಾಟನಾ ಸಮಾರಂಭವನ್ನು ಸಯ್ಯಿದ್ ಮುಹಮ್ಮದ್ ಶಮೀಮ್ ತಂಙಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಬಳಿಕ ದಫ್ ಆಟ ಸ್ಪರ್ಧೆ ನಡೆಯಲಿದೆ.

ಸೆಪ್ಟೆಂಬರ್ 13ರಂದು ಬೆಳಗ್ಗೆ 9 ಗಂಟೆಗೆ 25 ಮದರಸಗಳಿಂದ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಎರಡು ವಿಭಾಗಗಳಲ್ಲಿ ಎಂಟು ಸ್ಪರ್ಧಾ ವಿಭಾಗಗಳಲ್ಲಿ ಭಾಗವಹಿಸುವ ಪ್ರವಾದಿ ಕೀರ್ತನಾ ಸದಸ್ ನಡೆಯಲಿದೆ.

ಸಂಜೆ 7 ಗಂಟೆಗೆ 24ನೇ ವಾರ್ಷಿಕ ಸಮ್ಮೇಳನ, ಮೀಲಾದ್ ಮೆಹ್ಫಿಲ್ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಎ.ಕೆ.ಎಂ. ಅಶ್ರಫ್ ಶಾಸಕರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಕುಂಬಳೆ ಪ್ರೆಸ್ ಫೋರಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ನಿರ್ದೇಶಕ ಶಾಹುಲ್ ಹಮೀದ್ ಸಅದಿ, ಸಂಚಾಲಕ ಅಬ್ದುಲ್ ರಹ್ಮಾನ್ ಅದ್ರಿ, ಸಿದ್ದೀಖ್ ಊಜಾರ್, ಬಶೀರ್ ಮಡುವಂ, ಫೈಸಲ್ ಊಜಾರ್ ಹಾಗೂ ಯೂಸುಫ್ ಕೊಡಿಯಮ್ಮೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!