ಕಾಸರಗೋಡು : ಉದುಮ ಪಡಿಞ್ಞಾರ್ ಬಳಿಯ ತಚ್ಚರಕುನ್ನಿನ ಹಾರಿಸ್ ಎಂಬವರ ಪತ್ನಿ ಫಾತಿಮತ್ ಬುಶ್ರ (28) ಮತ್ತು ಅವರ ಆರು ವರ್ಷದ ಪುತ್ರಿ ಸೆಪ್ಟಂಬರ್ 8ರ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಸಹೋದರಿ ನೀಡಿದ ದೂರಿನನ್ವಯ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಮೊಬೈಲ್ ಫೋನ್ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸಿದರೂ, ಇಬ್ಬರ ಪತ್ತೆ ಸಾಧ್ಯವಾಗಿಲ್ಲ.
ನಾಪತ್ತೆಯಾಗಿ ವಾರ ಕಳೆದರೂ ಯಾವುದೇ ಖಚಿತ ಮಾಹಿತಿ ಸಿಗದ ಹಿನ್ನೆಲೆಯಲ್ಲಿ, ಪೊಲೀಸರು ಈಗ ತನಿಖಾ ಜಾಲವನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು, ಸಿಸಿಟಿವಿ ದೃಶ್ಯಾವಳಿ ಹಾಗೂ ನೆರೆಹೊರೆಯವರ ವಿಚಾರಣೆ ನಡೆಸಿ, ಇಬ್ಬರನ್ನೂ ಶೀಘ್ರವೇ ಪತ್ತೆಹಚ್ಚಲು ಪೊಲೀಸ್ ತಂಡ ಭರಪೂರ ಶ್ರಮಿಸುತ್ತಿದೆ.



Finally found a slot site that actually pays out! The bonuses here are insane and the graphics are top notch. Just check out bosdolarslot if you want some real action.