ಕುಂಬಳೆ : ಕುಂಬಳೆ ಪೊಲೀಸರ ತಂಡ ಕಿದೂರು ಮಯಂರಳಂ ಭಾಗದಲ್ಲಿ ದಿಢೀರ್ ಪರಿಶೀಲನೆ ನಡೆಸಿದೆ. ಈ ವೇಳೆ ಉಳುವಾರು ಹೊಳೆಯಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಸಂಬಂಧಿಸಿ ಲಾರಿ ಚಾಲಕ, ನೆಕ್ರಾಜೆ ಸಾಲತ್ತಡ್ಕದ ಮುಹಮ್ಮದ್ ಸಾಬಿತ್ (22) ಎಂಬಾತನನ್ನು ಬಂಧಿಸಲಾಗಿದ್ದು, ಲಾರಿಯ ಆರ್‌ಸಿ ಮಾಲಕನ ಮೇಲೆಯೂ ಪ್ರಕರಣ ದಾಖಲಾಗಿದೆ.

ಬಂಧಿತ ಚಾಲಕನನ್ನು ನ್ಯಾಯಾಲಯದ ಆದೇಶದಂತೆ ಜೈಲಿಗೆ ಕಳುಹಿಸಲಾಗಿದೆ.
ಹೊಳೆಯಿಂದ ಅಕ್ರಮವಾಗಿ ಮರಳು ಕದ್ದು ಸಾಗಿಸಿದ್ದಕ್ಕಾಗಿ ಕೇರಳ ನದಿ ದಂಡೆ ಸಂರಕ್ಷಣಾ ಕಾಯ್ದೆಯಡಿ ಈ ಕೇಸ್ ದಾಖಲಾಗಿದೆ.
ಮರಳಿನಿಂದ ಕಲ್ಲುಗಳನ್ನು ಬೇರ್ಪಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಬಳಸುತ್ತಿದ್ದ ಜಾಲರಿಯನ್ನೂ ಪೊಲೀಸರು ಸ್ಥಳದಲ್ಲಿ ವಶಪಡಿಸಿಕೊಂಡಿದ್ದಾರೆ.

