ಮಂಗಳೂರು: ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದು, ಮೀನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಅಧ್ಯಕ್ಷ ಚೇತನ್ ಬೆಂಗ್ರೆ ಹೇಳಿದರು.

ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀನುಗಾರಿಕಾ ಕ್ಷೇತ್ರಕ್ಕೆ ₹70 ಕೋಟಿಗೂ ಅಧಿಕ ಅನುದಾನ ಮಂಜೂರು ಮಾಡಲಾಗಿದೆ. ಕೋಟೆಪುರದಲ್ಲಿ ನಾಡದೋಣಿಗಳಿಗಾಗಿ ₹8 ಕೋಟಿ, ಕಸಬಾ ಬೆಂಗ್ರೆಯಲ್ಲಿ ಧೋಣಿ ತಂಗುದಾಣಕ್ಕೆ ₹6 ಕೋಟಿ, ಆಳಿವೆ ಬಾಗಿಲಿನಲ್ಲಿ ಬೋಟ್ಗಳ ಸುಗಮ ಸಂಚಾರಕ್ಕಾಗಿ ಬಾಯ್ಗಳ ಅಳವಡಿಕೆಗೆ ₹1 ಕೋಟಿ ಹಾಗೂ ಎಕ್ಕೂರಿನಲ್ಲಿ ಸಗಟು ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮೀನುಗಾರಿಕಾ ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ₹20 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಆಳಿವೆ ಬಾಗಿಲಿನಲ್ಲಿ ಡ್ರೆಡ್ಜಿಂಗ್ ಕಾಮಗಾರಿಗಾಗಿ ತುರ್ತಾಗಿ ₹5 ಕೋಟಿ ಮಂಜೂರು ಮಾಡಿರುವುದು ಸ್ವಾಗತಾರ್ಹ. ನೇತ್ರಾವತಿ, ಫಲ್ಗುಣಿ ಹಾಗೂ ಅಳೈಬಾಗಿಲಿನಲ್ಲಿ ಸಮರ್ಪಕ ಡ್ರೆಡ್ಜಿಂಗ್ ಆಗದೆ ಹಲವು ವರ್ಷಗಳಾಗಿದ್ದು, ಇದರಿಂದ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಆಧುನಿಕ ಕಟರ್ ಡ್ರೆಡ್ಜರ್ ಖರೀದಿಸಿ ಕರಾವಳಿಯ ಪ್ರಮುಖ ಬಂದರುಗಳಲ್ಲಿ ಬಳಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ಹೆಚ್ಚುವರಿ ಬೋಟ್ ತಂಗುದಾಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಿದರೆ ಸಾವಿರಾರು ಮೀನುಗಾರಿಕಾ ದೋಣಿಗಳಿಗೆ ಅನುಕೂಲವಾಗಲಿದೆ. ನದಿಪಾತ್ರದ ಸೂಕ್ತ ಪ್ರದೇಶಗಳಲ್ಲಿ ಬೋಟ್ ಯಾರ್ಡ್, ಫಿಶ್ ಲ್ಯಾಂಡಿಂಗ್ ಹಾಗೂ ಮೀನು ಸಂಸ್ಕರಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮೀನುಗಾರರಿಗೆ ಅನುಕೂಲ ಕಲ್ಪಿಸುವುದರ ಜತೆಗೆ ಸರ್ಕಾರಕ್ಕೂ ಆದಾಯ ಸೃಷ್ಟಿಸಬಹುದು ಎಂದು ಚೇತನ್ ಬೆಂಗ್ರೆ ಹೇಳಿದರು.

ಮೀನುಗಾರಿಕಾ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮತ್ತಷ್ಟು ಸಭೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೆ ವಿಷಯಗಳನ್ನು ತರಲಾಗುವುದು ಎಂಬ ಭರವಸೆ ದೊರೆತಿದೆ. ಸರ್ಕಾರ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದಕ್ಕೆ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಅಧ್ಯಕ್ಷ ರವಿ ಶ್ರೀಯನ್, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ಗಳಾದ ಸರಳ ಕರ್ಕೇರ, ಕವಿತಾ ವಾಸು, ಕುಮಾರ್ ಮೆಂಡನ್ ಹಾಗೂ ಜಿಲ್ಲಾ ಮುಖಂಡರಾದ ನವೀನ್ ಕರ್ಕೇರ, ಪವಿತ್ರ ಕರ್ಕೇರ ಉಪಸ್ಥಿತರಿದ್ದರು.


Honestly the best experience I have had with a slot site recently. The payouts are fair and the interface is super smooth. Definitely check out jili988casinologin if you want a reliable place to play.