ಕನ್ನಡ ಶಾಲೆಗಳ ಉಳಿವು–ಕನ್ನಡ ಭಾಷೆಯ ಉಳಿವು: ಗುರುವಾರ ಕನ್ನಡ ಭವನದಲ್ಲಿ ಚಿಂತನ ಮಂಥನ

ಕಾಸರಗೋಡು: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಕರ್ನಾಟಕ–ಕಾಸರಗೋಡು ಕನ್ನಡ ಯಾತ್ರೆ, ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರ ನೇತೃತ್ವದಲ್ಲಿ ಕಾಸರಗೋಡು ಪ್ರದೇಶದಲ್ಲಿ ಏಳು ದಿನಗಳಿಂದ ವಿವಿಧ ಕನ್ನಡ ಶಾಲೆಗಳ ಭೇಟಿ ಹಾಗೂ ಕನ್ನಡ ಮುಖಂಡರೊಂದಿಗೆ ಚರ್ಚೆಗಳ ಮೂಲಕ ನಡೆಯುತ್ತಿದೆ.

‘ಕನ್ನಡದ ನಡಿಗೆ–ಶಾಲೆಯ ಕಡೆಗೆ’ ಕಾರ್ಯಕ್ರಮದ ರೂವಾರಿ ಹಾಗೂ ಕನ್ನಡ ಭವನ, ಕನ್ನಡ ಚು.ಸಾ.ಪ. ಕೇಂದ್ರ ಸಮಿತಿ ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಅವರ ಸಂಪೂರ್ಣ ಸಹಕಾರದೊಂದಿಗೆ ಈ ಅಭಿಯಾನ ಮುಂದುವರಿದಿದೆ. ಕನ್ನಡ ಶಾಲೆಗಳ ಉಳಿವಿನ ಕುರಿತ ಉನೈಸ್ ಪೆರಾಜೆ ಅವರ ಕಾಳಜಿಗೆ ಬೆಂಬಲ ವ್ಯಕ್ತಪಡಿಸಿರುವ ಡಾ. ವಾಮನ್ ರಾವ್ ಬೇಕಲ್, ಅಭಿಯಾನಕ್ಕೆ ಸಂಪೂರ್ಣ ಸಹಕಾರ ಘೋಷಿಸಿದ್ದಾರೆ.

ಅಭಿಯಾನದ ಒಂಬತ್ತನೇ ದಿನವಾದ ಸೆ. 24ರಂದು ಗುರುವಾರ ಸಂಜೆ 4.30ಕ್ಕೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ಕಾಸರಗೋಡು ಸಮಾವೇಶ ನಡೆಯಲಿದೆ.

‘ಕನ್ನಡ ಶಾಲೆಗಳ ಉಳಿವು–ಕನ್ನಡ ಭಾಷೆಯ ಉಳಿವು’ ಎಂಬ ವಿಷಯದ ಕುರಿತು ‘ಕನ್ನಡ ಶಾಲೆ ಉಳಿಸಿ–ಚಿಂತನ ಮಂಥನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ಶಾಲೆಗಳು ಉಳಿಯಬೇಕು ಹಾಗೂ ಕಾಸರಗೋಡಿನಲ್ಲಿ ಕನ್ನಡ ಭಾಷೆ ಚಿರಕಾಲ ಬಾಳಬೇಕು ಎಂಬ ಆಶಯ ಹೊಂದಿರುವ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!