ಕಾಞಂಗಾಡ್: ನಿತ್ಯಾನಂದ ಆಶ್ರಮದಲ್ಲಿ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವ ಕಥನ ಕುರಿತ ಪುಸ್ತಕ ಬಿಡುಗಡೆ

ಕಾಞಂಗಾಡ್: ಕಾಞಂಗಾಡ್‌ನ ಹೊಸದುರ್ಗದ ಭಗವಾನ್ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಶನಿವಾರ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವ ಕಥನ ಕುರಿತ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಕೇಮಾರು ಸಾಂದೀಪನಿ ಸಾಧನಾ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಪುಸ್ತಕವನ್ನು ಬಿಡುಗಡೆಗೊಳಿಸಿ ಆಶೀರ್ವಚನವಿತ್ತರು.


ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಯವರು ವೇದಘೋಷದ ನಡುವೆ ದೀಪ ಪ್ರಜ್ವಲನಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶಿವಲಿಂಗಪ್ಪ ಸ್ವಾಮೀಜಿಯವರು ಅನುಗ್ರಹಿಸಿದರು. ಹಾಗೆಯೇ ಅತಿಥಿಗಳಾಗಿ ಕೊಡವೂರು ಸಾಯಿಬಾಬಾ ಮಂದಿರ ಹಾಗೂ ಕಾಞಂಗಾಡ್‌ನ ಸ್ವಾಮಿ ಶ್ರೀ ನಿತ್ಯಾನಂದ ವಿದ್ಯಾಕೇಂದ್ರದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಕೊಡವೂರು , ಸ್ವಾಮಿ ನಿತ್ಯಾನಂದ ವಿದ್ಯಾ ಕೇಂದ್ರದ ಉಪಾಧ್ಯಕ್ಷ ಮೋಹನ್‌ಚಂದ್ರ ನಂಬಿಯಾರ್, ಜಿಯೋ ಸ್ಟಾರ್ ನಿರ್ದೇಶಕ ಗಿರೀಶ್, ಗುರುಪುರದ ಪ್ರಧಾನ ಗಡಿಕಾರರಾದ ದೋಣಿಂಜೆಗುತ್ತು ಪ್ರಮೋದ್ ರೈ, ಮಂಗಳೂರಿನ ಇಂಜಿನಿಯರ್ ಕಿರಣ್ ಉಪಾಧ್ಯಾಯ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ (ನಿವೃತ್ತ)ದೇವರಾಜ್ ಗಾಂವ್‌ಕರ್, ಉದ್ಯಮಿ ರಾಮನಾಥ ಆಳ್ವ, ಮಂಗಳೂರು ಪಶ್ಚಿಮ ವಲಯದ ಐಜಿಪಿ ಕಚೇರಿಯ ಹೆಡ್‌ಕಾನ್‌ಸ್ಟೇಬಲ್ ಪ್ರಶಾಂತ್ ಶೆಟ್ಟಿ, ಕಾಸರಗೋಡಿನ ನಿವೃತ್ತ ಡೆಪ್ಯುಟಿ ಕಲೆಕ್ಟರ್ ಶಶಿಧರ ಶೆಟ್ಟಿ, ಉದ್ಯಮಿ ಧೀರಜ್ ಶೆಟ್ಟಿ,ಉದ್ಯಮಿ ವಿಜಯ್ ಶೆಟ್ಟಿ, ಶ್ರೀ ವಿದ್ಯಾ ಟ್ರಸ್ಟಿನ ಗೀತಾ ಶೆಟ್ಟಿ, ಮುಂಬೈಯ ಸ್ವಾಮಿ ಅವಧೂತಾನಂದರ ಭಕ್ತರು,ಮುಂಬೈ ಹೊಟೇಲ್ ಉದ್ಯಮಿಗಳಾದ ಹೇಮನಾಥ ಶೆಟ್ಟಿ, ಸುಧಾಕರ ಶೆಟ್ಟಿ,ಹಿರಿಯ ಪತ್ರಕರ್ತ ಮಲಾರ್ ಜಯರಾಮ್‌ರೈ, ಉದ್ಯಮಿ ಸುರೇಶ್ ರೈ ಮುಂತಾದ ಗಣ್ಯರು ಉಪಸ್ಥಿತರಿದ್ದರು.


ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವಗಳು, ಜೀವನ, ಕಾರ್ಯಗಳನ್ನೊಳಗೊಂಡ ಈ ಕೃತಿಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಬಿಡುಗಡೆಗೊಂಡಿರುವುದು ವಿಶೇಷವಾಗಿದೆ. ಈ ಸಂದರ್ಭ ಸ್ವಾಮಿ ಅವಧೂತಾನಂದರ ಜೀವನ ಮತ್ತು ಕಾರ್ಯಗಳ ಕುರಿತ ಸಾಕ್ಷ್ಯಚಿತ್ರವೊಂದರ ಪ್ರದರ್ಶನವೂ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!