ಬಡವರ ಜೀವ ಹಿಂಡುತ್ತಿರುವ ಬಡ್ಡಿ ರಾಕ್ಷಸರು: ಕಠಿಣ ಕ್ರಮಕ್ಕೆ ಆಗ್ರಹ

​ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡೂರು ಮತ್ತು ಅಂಗಡಿಮೊಗರು ಪ್ರದೇಶಗಳಲ್ಲಿ ಬಡ್ಡಿ ದಂಧೆಕೋರರ ಅಟ್ಟಹಾಸ ಮಿತಿಮೀರಿದೆ.

ಕಷ್ಟದಲ್ಲಿರುವ ಬಡವರು, ಶ್ರಮಿಕರು ಹಾಗೂ ಪರಿಶಿಷ್ಟ ಸಮುದಾಯದವರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ಈ ಕ್ರೂರಿಗಳು, ಮೀಟರ್ ಬಡ್ಡಿ ಹೆಸರಿನಲ್ಲಿ ದೋಚುತ್ತಿದ್ದಾರೆ.

ಸಾಲದ ನೆಪದಲ್ಲಿ ಅಮಾಯಕರನ್ನು ನಿರಂತರ ಶೋಷಣೆಗೆ ಒಳಪಡಿಸಿ, ಅವರ ಬದುಕನ್ನೇ ಸರ್ವನಾಶ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಖಂಡನೀಯ.

​ಸಾಮಾಜಿಕ ಕಾಳಜಿ ಮೆರೆಯಬೇಕಾದ ಸಂಘ-ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ವಹಿಸಿರುವ ಶಂಕಾಸ್ಪದ ಮೌನ, ಈ ಅಕ್ರಮ ದಂಧೆಗೆ ಪರೋಕ್ಷವಾಗಿ ನೀರೆರೆಯುತ್ತಿದೆ.

ಇಂತಹ ರಕ್ತಪಿಪಾಸುಗಳ ವಿರುದ್ಧ ಈವರೆಗೆ ಯಾವುದೇ ಕಾರ್ಯಾಚರಣೆ ನಡೆಯದಿರುವುದು ನಾಚಿಕೆಗೇಡು. ಇನ್ನಾದರೂ ನೂತನ ಜಿಲ್ಲಾಧಿಕಾರಿಗಳು ತಕ್ಷಣ ಜಾಗೃತರಾಗಿ, ಈ ಬಡ್ಡಿ ಮಾಫಿಯಾವನ್ನು ಮಟ್ಟಹಾಕಿ, ಬಡಜನರನ್ನು ಈ ಸಾಲದ ಕೂಪದಿಂದ ಶಾಶ್ವತವಾಗಿ ಮುಕ್ತಿಗೊಳಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!