ಸ್ವತಂತ್ರ ಭಾರತದ ರೂವಾರಿಗಳಾದ ಹಿರಿಯರ ತ್ಯಾಗಮಯ ಜೀವನವೇ ಕಾಂಗ್ರೆಸಿಗರಿಗೆ ಸ್ಪೂರ್ತಿಯಾಗಿದೆ. “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಕಾಂಗ್ರೆಸ್ ಎಂದೆಂದಿಗೂ ಜನ ಹೃದಯಗಳಲ್ಲಿ ಸ್ಥಾಯಿಯಾಗಿ ನಿಲ್ಲಲಿದೆ. ಕಾಂಗ್ರೆಸ್ ಪಕ್ಷದ ಉಲ್ಲೇಖವಿಲ್ಲದೆ ಆಧುನಿಕ ಭಾರತದ ಇತಿಹಾಸ ಪೂರ್ಣವಾಗದು ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ್ ಜೆ. ಎಸ್ ಹೇಳಿದ್ದಾರೆ.ಅವರು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಯ ನೂತನ ಕಚೇರಿ “ಶ್ರೀ ಕೆ.ಕೆ. ಜಾಯಿರನ್ ಸ್ಮೃತಿ ಭವನ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ಸಮಿತಿಯ ಮಜಿರ್ಪಳ್ಳದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಕಾಡಿ ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಅರಿಬೈಲ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನೇತಾರರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ, ಓಐಸಿಸಿ ನಾಯಕರಾದ ಶ್ರೀ ಅಬ್ದುಲ್ ಲತೀಫ್ ಯುನಿವರ್ಸಲ್,ಶಾಹುಲ್ ಹಮೀದ್ ಪೆರ್ಲ, ಉಮ್ಮರ್ ಬೋರ್ಕಳ, ಚಂದ್ರಶೇಖರ ಶೆಟ್ಟಿ ಬೆಜ್ಜ, ಹರ್ಷಾದ್ ವರ್ಕಾಡಿ, ಮನ್ಸೂರ್ ಬಿಎಂ,ಖಲೀಲ್ ಬಜಾಲ್, ಮುಹಮ್ಮದ್ ಮಜಾಲ್, ಫ್ರಾನ್ಸಿಸ್ ಡಿ’ಸೋಜಾ,ಇಕ್ಬಾಲ್ ಕಳಿಯೂರು, ಸತ್ಯನ್ ಸಿ.ಉಪ್ಪಳ, ಹನೀಫ್ ಪಡಿಂಞಾರ್, ಬಾಬು ಬಂದ್ಯೋಡು, ಗಣೇಶ್ ಪಾವೂರು, ಕಮಲಾಕ್ಷಿ, ಶಾಂತಾ ಆರ್ ನಾಯ್ಕ್, ಗೀತಾ ಬಂದ್ಯೋಡು, ಮಮತಾ ದಿವಾಕರ್, ಸೀತಾ ಡಿ, ಐರಿನ್, ಜಮೀಲಾ, ರೇಶ್ಮಾ ಟಿ.ವಿ, ಅಜೀಜ್ ಕಲ್ಲೂರು, ಹಮೀದ್ ಕಣಿಯೂರು, ಎಲಿಯಾಸ್ ಡಿ’ಸೋಜಾ, ಗಂಗಾಧರ ಕೆಎಸ್, ಸದಾಶಿವ ಕೆ,ಬಾಸಿತ್ ತಲೆಕ್ಕಿ, ಶೀನ ಕೆದುಂಬಾಡಿ, ರಂಜಿತ್ ಮಂಜೇಶ್ವರ, ಎಎಂ ಉಮ್ಮರ್ ಕುಂಞಿ, ಎಸ್.ಅಬ್ದುಲ್ ಖಾದರ್ ಹಾಜಿ, ವಿನೋದ್ ಪಾವೂರು, ಅಲಿ ಧರ್ಮನಗರ, ಕಮಲಾಕ್ಷ ಧರ್ಮನಗರ, ವಿಕ್ಟರ್ ಡಿ’ಸೋಜಾ, ಬಾಲಕೃಷ್ಣ, ವಸಂತರಾಜ್ ಶೆಟ್ಟಿ, ಸದಾಶಿವ ಪಜ್ವ, ಸತೀಶ್ ಅರಿಬೈಲ್, ಉಮ್ಮರ್ ಬೆಜ್ಜ, ಗೋಪಾಲ ಲೆಂಕ್ರಿಕಾಡು, ಮೂಸಾ ಡಿಕೆ, ಯಾಕೂಬ್ ಕೋಡಿ, ಮಾಲಿಂಗ ಮಂಜೇಶ್ವರ, ಅಶ್ರಫ್ ಆನೆಕಲ್ಲು, ಅಶ್ರಫ್ ಕೆಕೆ, ಅಬೂಸಾಲಿ ಮುರತ್ತಣೆ, ಮುಸ್ತಫಾ ಟಿಎ, ಸಲಾಂ ಮಾಂಕೋಡಿ, ಶಮೀರ್ ಮಾಂಕೋಡಿ, ಅಬೂಬಕ್ಕರ್ ಡಿ, ಅಬೂಬಕ್ಕರ್ ಉರ್ಣಿ, ಉಮ್ಮರ್ ಪಾಲೆಂಗ್ರಿ, ಅಬ್ದುಲ್ಲ ಹಾಜಿ ಕೆದಕ್ಕಾರ್, ಇಬ್ರಾಹಿಂ ಹಾಜಿ ಸುಳ್ಯಮೆ, ಚಂದ್ರಶೇಖರ ಅರಿಬೈಲ್, ಅಬೂಬಕ್ಕರ್ ಮಣಿಪರಂಬ, ಸಮದ್ ಕೆದಕ್ಕಾರ್, ಮೊಯ್ದಿನ್ ಹಾಜಿ ಬಳಪ್ಪು, ಶರೀಫ್ ಪಾಲೆಂಗ್ರಿ, ಟಿಎಂ ಮೊಯ್ದಿನ್ ,ಕೆಎಚ್ ಅಬೂಬಕ್ಕರ್, ಮುಸ್ತಫಾ ವೇದೋಡಿ, ಇಬ್ರಾಹಿಂ ಧರ್ಮನಗರ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ದಿವಾಕರ ಎಸ್ ಜೆ ಸ್ವಾಗತಿಸಿ, ಶ್ರೀ ಅಲಿ ದರ್ಮನಗರ ವಂದಿಸಿದರು.ದಿ. ಕೆ.ಕೆ.ಜಾಯಿರನ್ ಅವರ ಹಿರಿಯ ಪುತ್ರ ಶ್ರೀ ಪ್ರಭಾಕರ ಕೆ. ಧ್ವಜಾರೋಹಣ ನೆರವೇರಿಸಿದರು.