ಕ್ರೈಸ್ತ ಸನ್ಯಾಸಿಯರ ಬಂಧನ ವಿರೋಧಿಸಿ ಅಖಿಲ ಭಾರತ ಜನಾಧಿಪತ್ಯ ಮಹಿಳಾ ಅಸೋಸಿಯೇಶನ್ ಪ್ರತಿಭಟನೆ.

ಮಂಜೇಶ್ವರ: ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿಯರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್ಗಡ್ ಬಿಜೆಪಿ ಸರ್ಕಾರ ದ ಫ್ಯಾಸಿಸ್ಟ್ ರಾಜಕಾರಣವನ್ನು ವಿರೋಧಿಸಿ, ಅಖಿಲ ಭಾರತ ಜನಾಧಿಪತ್ಯ ಮಹಿಳಾ ಅಸೋಸಿಯೇಶನ್ ನ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ರಾಲಿಯು ಮಂಜೇಶ್ವರ ಹೊಸಂಗಡಿ ಪೇಟೆಯಲ್ಲಿ ನಡೆಯಿತು.

ರಾಲಿಯ ಉದ್ಘಾಟನೆ ಯನ್ನು ಜಿಲ್ಲಾ ಸಮಿತಿ ಮಾಜಿ ಸದಸ್ಯೆ ಬೇಬಿ ಶೆಟ್ಟಿ ನೆರವೇರಿಸಿ, ಅಧ್ಯಕ್ಷತೆಯನ್ನು ಏರಿಯಾ ಸಮಿತಿ ಅಧ್ಯಕ್ಷೆ ಐರಿನ್ ಜೋಸ್ಫಿನ್ ವಹಿಸಿದ್ದರು. ಏರಿಯಾ ಸಮಿತಿ ಕಾರ್ಯದರ್ಶಿ ಗೀತಾ ಸಾಮಾನಿ ಸ್ವಾಗತಿಸಿದರು .ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್., ಮಂಜೇಶ್ವರ ಪಾಲೋಟಿನ್ ಕಾನ್ವೆಂಟ್ ನ ಧರ್ಮ ಭಗಿನಿ ಆ್ಯಂಟನಿ ಮೇರಿ ರಾಲಿ ಯನ್ನುದ್ದೇಶಿಸಿ ಮಾತನಾಡಿದರು. ಸುಮಾರು ನೂರಕ್ಕೂ ಅಧಿಕ ಮಹಿಳೆಯರು ಪ್ರತಿಭಟನಾ ರಾಲಿಯ ಲ್ಲಿ ಭಾಗವಹಿಸಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!