ಕಾರಿನಲ್ಲಿ ಎಂಡಿಎಂಎ ಸಾಗಾಟ : ಜಾಲದ ನಾಲ್ಕು ಕಿಂಗ್‌ಪಿನ್‌ಗಳ ಸೆರೆ

​ಕಾಸರಗೋಡು: ರಾಜಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಕೋಳಿಚ್ಚಾಲ್‌ನಲ್ಲಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಮಾದಕ ವಸ್ತುವಿನೊಂದಿಗೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.

​ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೊರೆತ ಖಚಿತ ರಹಸ್ಯ ಮಾಹಿತಿಯ ಮೇರೆಗೆ ವಿಶೇಷ ಪಡೆಯ ಸಹಕಾರದೊಂದಿಗೆ ದಾಳಿ ನಡೆಸಿದ ರಾಜಪುರಂ ಪೊಲೀಸರು, ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 79 ಗ್ರಾಂ ಎಂಡಿಎಂಎ ಯನ್ನು ಜಪ್ತಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಮೂಲದ ಪ್ರಸ್ತುತ ಕಟ್ಟತ್ತಡ್ಕ ನಿವಾಸಿ ಶರೀಫ್, ಪುತ್ತಿಗೆಯ ಅಬ್ದುಲ್ ಷಹೀರ್ ಹಾಗೂ ದಂಡೆಗೋಳಿ ನಿವಾಸಿ ಮುಹಮ್ಮದ್ ನಾಸರ್ ಎಂಬಿವರನ್ನು ಸ್ಥಳದಲ್ಲೇ ಬಂಧಿಸಲಾಗಿದೆ.

ಬಂಧಿತ ಶಂಕಿತರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಮಾದಕ ವಸ್ತು ಜಾಲದ ಮತ್ತೊಂದು ಕೊಂಡಿ ಬಯಲಾಗಿದೆ. ಆರೋಪಿಗಳು ನೀಡಿದ ಸುಳಿವು ಆಧರಿಸಿ ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೋಝಿಕ್ಕೋಡ್‌ನಲ್ಲಿ ನವಾಸ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈತನಿಂದ ಬರೋಬ್ಬರಿ 160 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಒಟ್ಟಾರೆ ಈ ಜಾಲದಿಂದ ಬೃಹತ್ ಪ್ರಮಾಣದ ಮಾದಕ ದ್ರವ್ಯವನ್ನು ಸೀಜ್ ಮಾಡಲಾಗಿದೆ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!