ಉಪ್ಪಳ: ಗಾಂಧಿ ಜಯಂತಿಯ ಪ್ರಯುಕ್ತ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ನಯಾಬಜಾರ್ನಿಂದ ಉಪ್ಪಳದವರೆಗೆ ಪಾದಯಾತ್ರೆ ನಡೆಯಿತು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪ್ರಭು ಅವರು ಪಾದಯಾತ್ರೆಯ ಜಾತಾ ಕ್ಯಾಪ್ಟನ್ ರಾಜೇಶ್ ನಾಯ್ಕ್ ಅವರಿಗೆ ಪತಾಕೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಎ.ಆರ್. ಮೋಹನ್ ಅಧ್ಯಕ್ಷತೆ ವಹಿಸಿದ್ದರು.
ಸತ್ಯನ್ ಸಿ. ಉಪ್ಪಳ, ಇಬ್ರಾಹಿಂ ಇಚ್ಚಿಲಂಗೋಡು, ಪೃಥ್ವಿರಾಜ್ ಶೆಟ್ಟಿ, ಅಶ್ರಫ್ ಮುಟ್ಟಂ, ಜಾವೀದ್ ಮುಟ್ಟಂ ಹಾಗೂ ರಿಯಾಜ್ ಆಳಕೋಡು ಅವರು ಪಾದಯಾತ್ರೆಗೆ ನೇತೃತ್ವ ನೀಡಿದರು.

ಉಪ್ಪಳದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಕೆಪಿಸಿಸಿ ಕಾರ್ಯದರ್ಶಿ ಅಡ್ವಕೇಟ್ ಬಿ. ಸುಬ್ಬಯ್ಯ ರೈ ಉದ್ಘಾಟಿಸಿದರು. ಮಂಡಲಾಧ್ಯಕ್ಷ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.


ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್. ಮತ್ತು ಕೇರಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉನೈಸ್ ಬೇಡಕಂ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಣ ಪ್ರಭು, ಪೃಥ್ವಿರಾಜ್ ಶೆಟ್ಟಿ, ಬಾಬು ಬಂದಿಯೊಡು, ವಸಂತ ಮಾಸ್ಟರ್, ಕರಿಂ ಪೂನ, ಸತ್ಯನ್ ಸಿ. ಉಪ್ಪಳ, ಬಶೀರ್ ಡಿ. ಮುಟ್ಟಂ, ಬರ್ನಾಲ್ಡ್ ಅಲ್ಮೆಡ ಹಾಗೂ ನವೀನ್ ಶೆಟ್ಟಿ ಚೆರುಗೋಳಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ರಾಧಾಕೃಷ್ಣ ಶೆಟ್ಟಿ ಪಿ. ಹಾಗೂ ಜಯರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಫಾರೂಕ್ ಶಿರಿಯ ಅವರು ಸನ್ಮಾನಿತರನ್ನು ವೇದಿಕೆಗೆ ಪರಿಚಯಿಸಿದರು.ರಶೀದ್ ಮಾಸ್ಟರ್ ಸ್ವಾಗತಿಸಿದರು. ಸುಲಫಾ ಟೀಚರ್ ವಂದಿಸಿದರು.

