ಕುಂಬಳೆ: ಶಾಲಾ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿ ಕೆಎಸ್‌ಟಿಪಿ ರಸ್ತೆಯಲ್ಲಿ ತಾತ್ಕಾಲಿಕವಾಗಿ ಇರಿಸಲಾಗಿದ್ದ ರಸ್ತೆ ವಿಭಾಜಕಗಳನ್ನು ತೆರವುಗೊಳಿಸದ ಹಿನ್ನೆಲೆ ವಿವಾದ ಭುಗಿಲೆದ್ದಿದೆ.

ಕ್ರೀಡಾಕೂಟ ಮುಗಿದ ಬಳಿಕ ವಿಭಾಜಕಗಳನ್ನು ತೆರವುಗೊಳಿಸುವುದಾಗಿ ಪೊಲೀಸರು ನೀಡಿದ್ದ ಭರವಸೆ ಉಲ್ಲಂಘಿಸಿ, ಹೆಚ್ಚುವರಿಯಾಗಿ ಸಿಮೆಂಟ್ ವಿಭಾಜಕಗಳನ್ನು ಅಳವಡಿಸಲಾಗಿದೆ ಎಂದು ಬಸ್ ನೌಕರರು ಆರೋಪಿಸಿದ್ದಾರೆ.
ಈ ವಿಭಾಜಕಗಳಿಂದ ಆಸ್ಪತ್ರೆಗೆ ತೆರಳುವ ಆಂಬುಲೆನ್ಸ್‌ಗಳಿಗೂ ಹಾಗೂ ಸೀತಾಂಗೋಳಿ ಭಾಗದ ಬಸ್‌ಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಶನಿವಾರ ರಾತ್ರಿ ಸಿಐ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಯದಿದ್ದರೆ, ಸೋಮವಾರದಿಂದ ಪೆರ್ಲ, ಮುಳ್ಳೇರಿಯ ಹಾಗೂ ಕಾಸರಗೋಡು-ತಲಪ್ಪಾಡಿ ಮಾರ್ಗದ ಖಾಸಗಿ ಬಸ್‌ಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿವೆ.
ಈ ಹೋರಾಟಕ್ಕೆ ಆಟೋ ಮತ್ತು ಗೂಡ್ಸ್ ವಾಹನ ನೌಕರರು ಬೆಂಬಲ ಸೂಚಿಸಿದ್ದಾರೆ.

