ಕ್ಯಾನ್ಸರ್ ಪೀಡಿತ ಮಹಿಳೆಯ ಚಿಕಿತ್ಸೆಗೆ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯಿಂದ ಆರ್ಥಿಕ ನೆರವು

ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ (ರಿ) ಮಂಜೇಶ್ವರ ತನ್ನ 102ನೇ ಸಮಾಜಮುಖಿ ಯೋಜನೆಯ ಅಂಗವಾಗಿ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಒಳ್ಳಪಟ್ಟ ಸುಳ್ಯಮೆ ನಿವಾಸಿ ಮೀನಾಕ್ಷಿ ಅವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಆರ್ಥಿಕ ನೆರವು ನೀಡಿತು.

ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಮೀನಾಕ್ಷಿ ಅವರು ಪತಿ ಹಾಗೂ ಮಗನನ್ನು ಕಳೆದುಕೊಂಡಿದ್ದು, ಹೆಣ್ಣು ಮಕ್ಕಳೇ ಅವರಿಗೆ ಆಸರೆಯಾಗಿದ್ದಾರೆ. ಅವರ ಸಂಕಷ್ಟದ ಕುರಿತು ಸ್ವಾತಿ ಬಾಲಕೃಷ್ಣ ಅವರ ಪುತ್ರ ಇಶಾನ್ ಸುಳ್ಯಮೆ ಸಂಸ್ಥೆಗೆ ಮಾಹಿತಿ ನೀಡಿದ್ದರು.

ಮಾಹಿತಿಯನ್ನು ಪಡೆದು ಸ್ಪಂದಿಸಿದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ಸದಸ್ಯರು ನೀಡಿದ ವಾಗ್ದಾನದ ಮೊತ್ತವಾದ ₹25 ಸಾವಿರ ರೂಪಾಯಿಯನ್ನು ನ್ಯಾಯವಾದಿ ನವೀನ್ ರಾಜ್ ಅವರ ಮೂಲಕ ಮೀನಾಕ್ಷಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸುಜಾತಾ ಮಂಜೇಶ್ವರ, ಕೃಷ್ಣ ಅಟ್ಟೆಗೋಲಿ, ಅಂಕಿತ್ ಪಾವೂರು, ಸುಕೇಶ್ ಬೆಜ್ಜ, ವಸಂತ್ ಬೋರ್ಕಳ, ಆಶಾ, ಪ್ರದೀಪ್ ಮೊರತ್ತನೆ ಹಾಗೂ ಇಶಾನ್ ಸುಳ್ಯಮೆ ಉಪಸ್ಥಿತರಿದ್ದರು.

ಸಂಸ್ಥೆಯ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!