ಕಾಸರಗೋಡು: ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ ಕಂಠ ಪೂರ್ತಿ ಕುಡಿದು ಬಂದ ಯುವಕನೊಬ್ಬ ಭಾರೀ ದಾಂಧಲೆ ನಡೆಸಿದ್ದಾನೆ.

ಆಸ್ಪತ್ರೆಗೆ ನುಗ್ಗಿದ ಈತ ನರ್ಸ್ಗಳು ಹಾಗೂ ಸಿಬ್ಬಂದಿಗೆ ಬೆದರಿಕೆ ಹಾಕಿ, ಅಸಭ್ಯವಾಗಿ ನಿಂದಿಸಿದ್ದಾನೆ. ನಂತರ ಕ್ಯಾಶುವಲ್ಟಿ ಕಟ್ಟಡದ ಗ್ಲಾಸ್ ಹಾಗೂ ಟ್ರಾಫಿಕ್ ಕೋನ್ ಒಡೆದು ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ವಿ. ಜಿತೇಶ್ ಅವರು ನೀಡಿದ ದೂರಿನ ಮೇರೆಗೆ, ಕೃತ್ಯ ಎಸಗಿದ ಮುಹಮ್ಮದ್ ಶರೀಫ್ ವಿರುದ್ಧ ಕಾಸರಗೋಡು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಂದಲೆಯಿಂದಾಗಿ ಆಸ್ಪತ್ರೆಗೆ ಸುಮಾರು 10,000 ರೂಪಾಯಿ ನಷ್ಟ ಸಂಭವಿಸಿದೆ. ಈತ ಈ ಹಿಂದೆಯೂ ಹಲವು ಬಾರಿ ಆಸ್ಪತ್ರೆಗೆ ಬಂದು ಗಲಾಟೆ ಮಾಡಿ ಉಪದ್ರವ ನೀಡುತ್ತಿದ್ದ ಎಂದು ಸೂಪರಿಂಟೆಂಡೆಂಟ್ ತಿಳಿಸಿದ್ದಾರೆ.



Such a vibe here. The bonuses are actually fair and the rewards keep me coming back every day. You can’t go wrong with idole99.