
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಾಸರಗೋಡು ಶ್ರೀ ತುಳಸಿ ಜ್ಞಾನವಿಕಾಸ ಕೇಂದ್ರ ಉಳಿಯತ್ತಡ್ಕ ಇದರ ದಶಮಾನೋತ್ಸವ ಕಾರ್ಯಕ್ರಮ ತರುಣ ಕಲಾವೃಂದ ಪರಕ್ಕಿಲದಲ್ಲಿ ನಡೆಯಿತು .



ಮಧೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಶಾನಬೋಗ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು . ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಜ್ಞಾನೇಶ್ವರ ಆಚಾರ್ಯ ಪರಕ್ಕಿಲ ಭಾಗವಹಿಸಿದರು .

ಶ್ರೀ ತುಳಸಿ ಜ್ಞಾನವಿಕಾಸ ಕೇಂದ್ರದ ಸದಸ್ಯರಾದ ಶ್ರೀಮತಿ ಜಯಶ್ರೀ ಅಧ್ಯಕ್ಷ ಸ್ಥಾನ ವಹಿಸಿದರು . ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾಸರಗೋಡು ಮಹಿಳಾ ಸಂರಕ್ಷಣಾ ಇಲಾಖೆಯ ವಕೀಲರಾಗಿರುವ ಶ್ರೀಮತಿ ಸುಚಿತ್ರ ಅವರು ಕೇಂದ್ರದ ಸದಸ್ಯರಿಗೆ ಮಹಿಳೆಯರಿಗಿರುವ ವಿವಿಧ ಹಕ್ಕುಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು .


ಕಾಸರಗೋಡು ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ , ಕಾಸರಗೋಡು ತಾಲೂಕಿನ ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಸೌಮ್ಯಗಿರೀಶ್ , ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ವಿಶಾಲಾಕ್ಷಿ ಕೂಡ್ಲು , ಮಧೂರು ಶೌರ್ಯ ಘಟಕದ ಸ್ವಯಂ ಸೇವಕರು , ವಲಯದ ಸೇವಾಪ್ರತಿನಿಧಿಗಳು , ಶ್ರೀ ತುಳಸಿ ಜ್ಞಾನವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದರು .

ಕೇಂದ್ರದ ಸದಸ್ಯರು ಜ್ಞಾನವಿಕಾಸ ಕೇಂದ್ರದಿಂದ ಸಿಗುವ ಪ್ರಯೋಜನೆಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿದರು . ಶ್ರೀಮತಿ ನಳಿನಾಕ್ಷಿ ಉಳಿಯತ್ತಡ್ಕ ಅವರು ಜ್ಞಾನವಿಕಾಸ ಕೇಂದ್ರದ ಸಾಧನ ವರದಿಯನ್ನು ಮಂಡಿಸಿದರು .ಕೇಂದ್ರ ಸದಸ್ಯರಿಗೆ ಸ್ಪರ್ದೆ ನಡೆಯಿತು . ಸ್ಪರ್ದ್ರೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು . ಈ ಕಾರ್ಯಕ್ರಮವನ್ನ ಶ್ರೀಮತಿ ಮೀರಾಹರೀಶ್ ಗಟ್ಟಿ ಪರಕ್ಕಿಲ ನಿರೂಪಿಸಿ , ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಸೌಮ್ಯಗಿರೀಶ್ ಸ್ವಾಗತಿಸಿ , ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ ವಂದಿಸಿದರು .

