60 ವರ್ಷದ ಇಬ್ರಾಹಿಂ ಬಾಡಿಪಲ್ಪ ನಾಪತ್ತೆ – ಸುಳಿವು ಸಿಕ್ಕರೆ ಸಂಪರ್ಕಿಸಲು ಮನವಿ

​

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೀಂಜ ಗ್ರಾಮ ಪಂಚಾಯತ್‌ಗೆ ಸೇರಿದ ಕಡಂಬಾರು ನಿವಾಸಿ ಇಬ್ರಾಹಿಂ (60), ಬಾಡಿಪಲ್ಪ ಅವರು ಮಂಗಳವಾರ ಬೆಳಿಗ್ಗೆಯಿಂದ ಕಾಣೆಯಾಗಿದ್ದಾರೆ. ಈ ಕುರಿತು ಮಂಜೇಶ್ವರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

​ ಮಂಗಳವಾರ ಬೆಳಿಗ್ಗೆ ಕಡಂಬಾರಿನಿಂದ ಆಟೋರಿಕ್ಷಾ ಮೂಲಕ ಹೊಸಂಗಡಿಗೆ ತೆರಳಿದ್ದನ್ನು ಸ್ಥಳೀಯರು ಗಮನಿಸಿದ್ದು, ತದನಂತರ ಅವರು ನಾಪತ್ತೆಯಾಗಿದ್ದಾರೆ.ಪ್ರಸ್ತುತ ಇವರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ.

​ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ಲಭಿಸಿದಲ್ಲಿ ಕೂಡಲೇ ಸ್ಥಳೀಯ ಪೊಲೀಸರಿಗೆ ಅಥವಾ ಮೀಂಜ ಗ್ರಾಮ ಪಂಚಾಯತ್‌ಗೆ 9995892726 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!