ಮಧೂರು: ಮಧೂರು ಗ್ರಾಮ ಪಂಚಾಯತ್‌ನ 13ನೇ ಮೀಪುಗುರಿ ವಾರ್ಡ್‌ನ ಅಂಗನವಾಡಿ ಸಂಖ್ಯೆ 87ರಲ್ಲಿ ಪ್ರವೇಶೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮವನ್ನು ವಾರ್ಡ್ ಸದಸ್ಯ ಗಣೇಶ್ ಮೀಪುಗುರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಸದಸ್ಯ ಗೋಪಾಲಕೃಷ್ಣ, ಆಶಾ ಕಾರ್ಯಕರ್ತೆ, ಸಿಡಿಎಸ್ ಸದಸ್ಯೆ ಹಾಗೂ ಸಮಿತಿ ಸದಸ್ಯ ರಘು ಮೀಪುಗುರಿ ಅವರು ಶುಭ ಹಾರೈಸಿ ಮಾತನಾಡಿದರು.

ಮಕ್ಕಳ ಕಲಿಕೆಯ ಮೊದಲ ಹೆಜ್ಜೆಯಾದ ಅಂಗನವಾಡಿ ಶಿಕ್ಷಣವು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿ ಎಂದು ಹಾರೈಸಿದರು. ಪ್ರವೇಶೋತ್ಸವದ ಅಂಗವಾಗಿ ಮಕ್ಕಳಲ್ಲಿ ಹೊಸ ಕಲಿಕೆಯ ಉತ್ಸಾಹ ಮೂಡಿಸುವ ಕಾರ್ಯಕ್ರಮ ನಡೆಯಿತು.


