ಭಜನೆ, ಕುಣಿತ ಭಜನೆಯೊಂದಿಗೆ ಮಗನ ಹುಟ್ಟುಹಬ್ಬ ಆಚರಣೆ: ಪಾವಳ ವರ್ಕಾಡಿ ಕುಟುಂಬದಿಂದ ಮಾದರಿ ಕಾರ್ಯ

ಪಾವಳ ವರ್ಕಾಡಿ: ಇಂದಿನ ಆಧುನಿಕ ಜೀವನಶೈಲಿಯ ನಡುವೆ ಮಕ್ಕಳ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ನಳಿನಾಕ್ಷಿ ಮತ್ತು ನವೀನ್ ದಂಪತಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಅಕ್ಟೋಬರ್ 31ರಂದು ದಂಪತಿಯ ದ್ವಿತೀಯ ಪುತ್ರ, ಶ್ರಾವ್ಯಳ ತಮ್ಮ ಮಾಸ್ಟರ್ ಸನ್ವಿತ್ ಅವರ ಹುಟ್ಟುಹಬ್ಬವನ್ನು ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಹುಟ್ಟುಹಬ್ಬದ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜಾ ವಿಧಿವಿಧಾನಗಳು, ಭಜನೆ, ಕುಣಿತ ಭಜನೆ ಹಾಗೂ ಭಕ್ತಿಗಾನ ಸುಧೆ ಕಾರ್ಯಕ್ರಮಗಳು ನಡೆದವು. ಬಳಿಕ ಅನ್ನದಾನ ಸೇವೆಯನ್ನೂ ಆಯೋಜಿಸಲಾಗಿತ್ತು.

ಸಾಂಪ್ರದಾಯಿಕ ಆಚರಣೆಗಳಿಗೆ ಆದ್ಯತೆ ನೀಡಿ, ಭಕ್ತಿ ಮತ್ತು ಧಾರ್ಮಿಕ ಮೌಲ್ಯಗಳೊಂದಿಗೆ ಮಗನ ಹುಟ್ಟುಹಬ್ಬವನ್ನು ಆಚರಿಸಿದ ಕುಟುಂಬದ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಕುಣಿತ ಭಜನೆ ತಂಡ, ಬಾಯಿಕಟ್ಟೆ ವತಿಯಿಂದ ಕುಟುಂಬಕ್ಕೆ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಲಾಯಿತು.

ಶ್ರೀ ಕಲಿಯುಗ ವರದ ಅಯ್ಯಪ್ಪ ಸ್ವಾಮಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಹಾಗೂ ಸ್ವಾಮಿ ಕೊರಗಜ್ಜ ದೈವದ ಅನುಗ್ರಹದಿಂದ ಸನ್ವಿತ್ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೆ ಆಯುರಾರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿ ಲಭಿಸಲಿ ಎಂದು ಹಾರೈಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!