
ಕುಂಬಳೆ : ಸೂರಂಬೈಲು ಜಂಕ್ಷನ್ನಲ್ಲಿ ಟಿಪ್ಪರ್ ಲಾರಿ, ಗೂಡ್ಸ್ ಆಟೋ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ತ್ರಿಕೋನ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಸೀತಾಂಗೋಳಿ ಕಡೆಯಿಂದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ, ಹಾಲು ಸಾಗಿಸುತ್ತಿದ್ದ ಗೂಡ್ಸ್ ಆಟೋ ಹಾಗೂ ಆಟೋ ರಿಕ್ಷಾಗೆ ಏಕಕಾಲಕ್ಕೆ ಢಿಕ್ಕಿ ಹೊಡೆದಿದೆ.

ಈ ದುರ್ಘಟನೆಯಲ್ಲಿ ಗೂಡ್ಸ್ ಆಟೋ ಚಾಲಕ ಚೌಕಿಯ ಜುನೈದ್ ಮತ್ತು ಆಟೋ ರಿಕ್ಷಾ ಚಾಲಕ ಸೂರಂಬೈಲಿನ ಸುಂದರ್ ಎಂಬುವವರಿಗೆ ಗಾಯಗಳಾಗಿದ್ದು, ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿ ಯಾವುದೇ ಪ್ರಯಾಣಿಕರಿಲ್ಲದ ಕಾರಣ, ಸಂಭವಿಸಬಹುದಿದ್ದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ.


