ನಾಲ್ಕು ವರ್ಷಗಳಿಂದ ಕ್ರೈಂ ಬ್ರಾಂಚ್‌ಗೆ ಬೇಕಾಗಿರುವ ಕೊಲೆ ಪ್ರಕರಣದ ಆರೋಪಿಯೊಂದಿಗೆ ಯುಡಿಎಫ್ ನಾಯಕರು!

ಎಂಎಲ್‌ಎಗಳೊಂದಿಗಿನ ಫೋಟೋಗಳು ಬಹಿರಂಗ; ಗಲ್ಫ್‌ನ ಜ್ಯುವೆಲ್ಲರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರೋಪಿಯೊಂದಿಗೆ ನಾಯಕರು!

ಕಾಸರಗೋಡು: ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಕ್ರೈಂ ಬ್ರಾಂಚ್ ಪೊಲೀಸರು ಹುಡುಕುತ್ತಿರುವ ಕೊಲೆ ಪ್ರಕರಣದ ಆರೋಪಿಯೊಂದಿಗೆ ಯುಡಿಎಫ್ ನಾಯಕರು ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೋಗಳು ಇದೀಗ ಬಹಿರಂಗವಾಗಿವೆ.

ಕಾಸರಗೋಡಿನ ಅಬೂಬಕ್ಕರ್ ಸಿದ್ದೀಕ್ ಕೊಲೆ ಪ್ರಕರಣದ 13ನೇ ಆರೋಪಿಯಾಗಿರುವ ಅಹಮ್ಮದ್ ರಯೀಸ್ ಜೊತೆ ಶಾಸಕ ಸಂದೀಪ್ ವಾರಿಯರ್, ಎಕೆಎಂ ಅಶ್ರಫ್ ಹಾಗೂ ಎನ್.ಎ. ನೆಲ್ಲಿಕುನ್ನು ಸೇರಿದಂತೆ ನಾಯಕರು ಕಾಣಿಸಿಕೊಂಡಿರುವ ಚಿತ್ರಗಳು ಹೊರಬಂದಿವೆ. ಗಲ್ಫ್‌ನಲ್ಲಿ ನಡೆದ ಜ್ಯುವೆಲ್ಲರಿ ಉದ್ಘಾಟನಾ ಸಮಾರಂಭದ ಸಂದರ್ಭದ ಚಿತ್ರಗಳಿವು.

ಪೈವಳಿಕೆ ಅಂಬಿಕಾನ ನಿವಾಸಿ ಅಹಮ್ಮದ್ ರಯೀಸ್, ಮಂಜೇಶ್ವರದ ಮುಗು ರಸ್ತೆಯಲ್ಲಿ ನಡೆದ ಅಬೂಬಕ್ಕರ್ ಸಿದ್ದೀಕ್ ಕೊಲೆ ಪ್ರಕರಣದ 13ನೇ ಆರೋಪಿಯಾಗಿದ್ದಾನೆ.

2022ರ ಜೂನ್ 26ರಂದು ನಡೆದ ಈ ಕೊಲೆ ಇಡೀ ನಾಡನ್ನೇ ಬೆಚ್ಚಿಬೀಳಿಸಿತ್ತು. ಸಿದ್ದೀಕ್ ಅವರ ಸಹೋದರನನ್ನು ಒತ್ತೆಯಾಳಾಗಿ ಇರಿಸಿಕೊಂಡು, ಗಲ್ಫ್‌ನಲ್ಲಿದ್ದ ಸಿದ್ದೀಕ್ ಅವರನ್ನು ಊರಿಗೆ ಕರೆಸಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಆರೋಪಿಗಳು ಅಪಹರಿಸಿ, ಪೈವಳಿಗೆಯ ನೂಚಿಯಲ್ಲಿರುವ ಎರಡು ಅಂತಸ್ತಿನ ಮನೆಗೆ ಹಾಗೂ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!