ಉಪ್ಪಳ: ಗ್ರಾಹಕರ ವಿಶ್ವಾಸ ಮತ್ತು ನಂಬಿಕೆಗೆ ಪಾತ್ರವಾಗಿರುವ ಸಿಟಿ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ನೂತನ ಹಾಗೂ ವಿಶಾಲ ಮಳಿಗೆಯು ಉಪ್ಪಳದಲ್ಲಿ ಶುಭಾರಂಭಗೊಂಡಿತು.



23 ವರ್ಷಗಳ ಹಿಂದೆ ಉಪ್ಪಳದಲ್ಲೇ ತನ್ನ ವ್ಯಾಪಾರ ವಹಿವಾಟು ಆರಂಭಿಸಿದ್ದ ಸಂಸ್ಥೆಯು, ಗ್ರಾಹಕರಿಂದ ದೊರೆತ ಅಪಾರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹದ ಫಲವಾಗಿ ಇದೀಗ ಮತ್ತಷ್ಟು ವಿಶಾಲವಾದ ನೂತನ ಮಳಿಗೆಯನ್ನು ಆರಂಭಿಸಿದೆ.


ಸಯ್ಯದ್ ಅಲಿ ತಂಙಳ್ ಕುಂಬೋಲ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಕೆ.ಎ. ಕರೀಂ, ಇರ್ಫಾನ್ ಇಕ್ಬಾಲ್ ಸೇರಿದಂತೆ ವಿಶೇಷ ಆಹ್ವಾನಿತ ಅತಿಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.


ನೂತನ ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ವಿನ್ಯಾಸಗಳ ಚಿನ್ನಾಭರಣಗಳು ಹಾಗೂ ಆಕರ್ಷಕ ಡೈಮಂಡ್ ಆಭರಣಗಳ ವಿಶಾಲ ಸಂಗ್ರಹ ಲಭ್ಯವಿದೆ.
23 ವರ್ಷಗಳ ಗ್ರಾಹಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ಆಧುನಿಕ ಸೌಲಭ್ಯಗಳೊಂದಿಗೆ ಆರಂಭಗೊಂಡಿರುವ ಈ ನೂತನ ಮಳಿಗೆಯು ಆಭರಣ ಪ್ರಿಯರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ.

