
ಕಾಸರಗೋಡು : ಜಿಲ್ಲೆಯಲ್ಲಿ ಮೈಲಿಗೆಯಿಲ್ಲದ ಹದಿಹರೆಯದ ವಿದ್ಯಾರ್ಥಿಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತೀವ್ರ ಆಕ್ರೋಶ ಮೂಡಿಸಿದೆ.ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ 11 ವರ್ಷದ ಬಾಲಕನನ್ನು ಒಂಟಿ ಜಾಗಕ್ಕೆ ಕರೆದೊಯ್ದು ಅಬ್ದುಲ್ ರಜಾಕ್ (62) ಎಂಬಾತ ವಿಕೃತಿ ಮೆರೆದಿದ್ದಾನೆ.

ಘಟನೆಯು ಕಳೆದ ಭಾನುವಾರ ನಡೆದಿದ್ದು, ಈ ಕುರಿತು ಬಾಲಕನು ಮನೆಗೆ ತಲುಪಿ ಹೆತ್ತವರ ಬಳಿ ಅಳಲು ತೋಡಿಕೊಂಡಿದ್ದಾನೆ. ತಕ್ಷಣ ಎಚ್ಚೆತ್ತ ಪೋಷಕರು ವಳ್ಳೇರಿಕುಂಡು ಸಿ.ಐ. ನಳಿನಾಕ್ಷ ಅವರ ಬಳಿ ದೂರು ದಾಖಲಿಸಿದ್ದಾರೆ.

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಶೇಷವೆಂದರೆ, ಈ ಕಾಮುಕ ಕಳೆದ ವರ್ಷವೂ ಮತ್ತೊಬ್ಬ ಬಾಲಕನ ಮೇಲೆ ಇದೇ ರೀತಿಯ ದೌರ್ಜನ್ಯ ಎಸಗಿ ಜೈಲುಶಿಕ್ಷೆ ಅನುಭವಿಸಿದ್ದ ಕುಖ್ಯಾತನಾಗಿದ್ದಾನೆ.


