ಕಾಸರಗೋಡಿನಲ್ಲಿ ಸೈಬರ್ ವಂಚನೆ ಹೆಚ್ಚಳ: ನಕಲಿ ಲಿಂಕ್ ಮೂಲಕ ಲಕ್ಷಾಂತರ ರೂ. ದೋಚಿದ ಖದೀಮರು

ಕಾಸರಗೋಡು : ಜಿಲ್ಲೆಯಲ್ಲಿ ಮೊಬೈಲ್ ಫೋನ್ ಹ್ಯಾಕ್ ಮಾಡಿ ಮತ್ತು ನಕಲಿ ಲಿಂಕ್‌ಗಳ ಮೂಲಕ ಬ್ಯಾಂಕ್ ಖಾತೆಯಿಂದ ಹಣ ದೋಚುವ ಪ್ರಕರಣಗಳು ಹೆಚ್ಚುತ್ತಿವೆ.

ಕುಂಜಾರ್‌ನ ಅಬ್ದುಲ್ ಅಸೀಸ್ ಅವರ ಬರೋಡಾ ಬ್ಯಾಂಕ್ ಖಾತೆಯಿಂದ 52,349 ರೂ. ಸೇರಿದಂತೆ ಒಟ್ಟು 5 ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ. ಬೇಳದ ಕೆ.ಎನ್. ಲೋಕೇಶ್ ಅವರ ಗ್ರಾಮೀಣ ಬ್ಯಾಂಕ್ ಖಾತೆಯಿಂದಲೂ 50,900 ರೂ.ಗಳನ್ನು ಹಿಂಪಡೆಯಲಾಗಿದೆ.

ಈ ಕುರಿತು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೈಬರ್ ಸೆಲ್ ಸಹಾಯದಿಂದ ತನಿಖೆ ಮುಂದುವರೆದಿದೆ. ನಕಲಿ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರೂ ವಂಚನೆ ಪ್ರಕರಣಗಳು ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!