ಕಾಟಿಪಳ್ಳದ ಮೈದಾನದ ಬಳಿಯಲ್ಲಿ ಸ್ಕೂಟರಿಂದ ಬಿದ್ದು ಯುವಕನ ಶವದ ಜೊತೆಯಾಗಿ ರಿವಾಲ್ವರ್ ಪತ್ತೆ : ಸಾವಿನಲ್ಲಿ ನಿಗೂಢತೆ

ಕಾಸರಗೋಡು : ಬಾನುವಾರ ರಾತ್ರಿ ಕಾಟಿಪಳ್ಳ ಮೈದಾನದ ಬಳಿ ಸ್ಕೂಟರ್‌ನಿಂದ ಬಿದ್ದಂತೆ ಕಂಡ ಹೈದರಾಲಿ ಅವರನ್ನು ಸ್ಥಳೀಯರು ಚರ್ಕಳದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದರು.

ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅವರು ಬಿದ್ದಿದ್ದ ಸ್ಥಳದಿಂದಲೇ ರಿವಾಲ್ವರ್ ಪತ್ತೆಯಾಗಿದ್ದು, ಗುಂಡು ಸಿಡಿಯಲ್ಪಟ್ಟು ಸಾವು ಸಂಭವಿಸಿರಬೇಕೆಂದು ಶಂಕೆ ವ್ಯಕ್ತವಾಗಿದೆ.

​ಆದರೂ, ಪೊಲೀಸರು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶದಲ್ಲಿದ್ದ ಇವರು ಮೂರು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದ್ದರು. ಮೃತರು ಅವಿವಾಹಿತರಾಗಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!