ಮನೆಯೊಂದರಲ್ಲಿ ಬೃಹತ್ ಕಳ್ಳತನ : ನಗ – ನಗದು ಕಳವು

​ಕಾಸರಗೋಡು : ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಪನಯಾಲ್, ಪೆರಿಯಾಟಡುಕ್ಕದ ನೀರಾಟ್ಟೆಯಲ್ಲಿರುವ ಧನ್ಯ ಅವರ ಮನೆಯಲ್ಲಿ ಗುರುವಾರ ಮುಂಜಾನೆ 5ರಿಂದ 6 ಗಂಟೆಯ ನಡುವೆ ಬೃಹತ್ ಕಳ್ಳತನ ನಡೆದಿದೆ.

ಪ್ರತಿದಿನದಂತೆ ಧನ್ಯ ಬೆಳಗಿನ ವಾಯುವಿಹಾರಕ್ಕೆಂದು 5.10ಕ್ಕೆ ಮನೆಗೆ ಬೀಗ ಹಾಕಿ ಹೊರಹೋಗಿ 6 ಗಂಟೆಗೆ ಮರಳಿದ್ದಾರೆ. ವಿದ್ಯುತ್ ಮೀಟರ್ ಬಾಕ್ಸ್‌ನಲ್ಲಿ ಇಟ್ಟಿದ್ದ ಕೀ ಬಳಸಿ ಮನೆ ಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿದ್ದ ಐದು ಪವನ್ ಚಿನ್ನ ಮತ್ತು ಸುಮಾರು ಮೂವತ್ತು ಸಾವಿರ ರೂಪಾಯಿ ದೋಚಿದ್ದಾರೆ. ಕ

ಳ್ಳತನ ನಡೆದ ವೇಳೆ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾದ ಧನ್ಯ ಅವರ ಮಗಳು ಮೇಲಂತಸ್ತಿನ ಕೊಠಡಿಯಲ್ಲಿ ಮಲಗಿದ್ದರು. ಹಿಂತಿರುಗಿ ಬಂದಾಗ ಕಳ್ಳತನದ ವಿಷಯ ತಿಳಿದ ಧನ್ಯ, ಸಹೋದರ ಮಣಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಣಿ ಬಂದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬೇಕಲ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!