ಪೆರಿಯ ಮಿಲ್ಮಾ ಬೂತ್ ದಾಳಿ ಪ್ರಕರಣ: 13 ಯೂತ್ ಕಾಂಗ್ರೆಸ್ ಕಾರ್ಯಕರ್ತರು ಖುಲಾಸೆ

​ಕಾಸರಗೋಡು : ಪೆರಿಯದಲ್ಲಿ ನಡೆದ ಹರತಾಳದ ವೇಳೆ ಮಿಲ್ಮಾ ಬೂತ್ ಮೇಲೆ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ 13 ಮಂದಿ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ದ್ವಿತೀಯ) ಖುಲಾಸೆಗೊಳಿಸಿದೆ.

2019ರ ಫೆಬ್ರವರಿ 17ರ ರಾತ್ರಿ ಪೆರಿಯ ಕಲ್ಲೋಟ್‌ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‌ಲಾಲ್ ಮತ್ತು ಕೃಪೇಶ್ ಅವರ ಬರ್ಬರ ಕೊಲೆಯ ಬಳಿಕ ಉಂಟಾದ ರಾಜಕೀಯ ಸಂಘರ್ಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿತ್ತು.

ಮರುದಿನದ ಹರತಾಳ ವೇಳೆ ಬೂತ್ ಹಾನಿಗೊಳಗಾದ ಕುರಿತು ಮಾಲೀಕ ಗೋಪಾಲನ್ ನೀಡಿದ ದೂರಿನ ಆಧಾರದ ಮೇಲೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗದ ಕಾರಣ ನ್ಯಾಯಾಲಯವು ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.

ಉಣ್ಣಿಕೃಷ್ಣನ್, ಶಶಿಧರನ್, ರಾಜನ್, ರಾಜೇಶ್, ಅನಿಲ್, ರಂಜಿತ್ ಸೇರಿದಂತೆ 13 ಮಂದಿ ಖುಲಾಸೆಗೊಂಡವರು.

ಆರಂಭದಲ್ಲಿ ಮೊದಲ ಆರೋಪಿಯಾಗಿದ್ದ ಮಾಜಿ ಪಂಚಾಯತ್ ಅಧ್ಯಕ್ಷ ಸಿ.ಕೆ. ಅರವಿಂದಾಕ್ಷನ್ ಅವರು ಘಟನೆಯ ವೇಳೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದುದು ತನಿಖೆಯಲ್ಲಿ ದೃಢಪಟ್ಟಿದ್ದರಿಂದ ಅವರನ್ನು ಮೊದಲೇ ಕೈಬಿಡಲಾಗಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!