NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ.

ಮೀಂಜ ಪಂಚಾಯತ್ NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ,ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲು ಗೊಳಿಸುವ ಕೇಂದ್ರ ಸರಕಾರದ ಧೋರಣೆಗೆದುರಾಗಿ ಹಾಗೂ ಕೇಂದ್ರ ಸರ್ಕಾರದ ತೀರ್ಮಾನವನ್ನು ತಿದ್ದುಪಡಿಗೊಳಿಸುವಂತೆ ಆಗ್ರಹಿಸಿ ,ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು.

f ಧರಣಿ ಯ ಉದ್ಘಾಟನೆ ಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಕೇರಳ ರೈತ ಸಂಘದ ರಾಜ್ಯ ಸಮಿತಿ ಸದಸ್ಯರೂ ಆದ ಕಾ: ಕೆ.ಆರ್.ಜಯಾನಂದ ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು NREG ಏರಿಯಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಎಲಿಯಾನ ವಹಿಸಿದ್ದು, ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ,ಸಿ. ಪಿ.ಎಂ.ಲೋಕಲ್ ಕಾರ್ಯದರ್ಶಿಗಳಾದ ಲೋಕೇಶ್ ಚಿನಾಲ,ಟಿ.ರಾಮಚಂದ್ರ ಮಹಿಳಾ ಅಸೋಸಿಯೇಶನ್ ನ ನೇತಾರೆ ಶ್ರೀಮತಿ ಐರಿನ್ ಜೋಸ್ಫಿನ್ ಮೊದಲಾದವರು ನೇತೃತ್ವ ವಹಿಸಿದ್ದರು. ಮೀಂಜ ಪಂಚಾಯತ್ ಕಚೇರಿ ಯಿಂದ ಅಂಚೆ ಕಚೇರಿ ವರೆಗೆ ನಡೆದ ಮಾರ್ಚ್ ನಲ್ಲಿ ಅಧಿಕ ಮಂದಿ ಎನ್.ಆರ್.ಈ. ಜಿ ಕಾರ್ಮಿಕರು ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!