ಕಾಸರಗೋಡು – ಕಾಞ್ಞಂಗಾಡು ನಡುವಿನ ರಾಜ್ಯ ಹೆದ್ದಾರಿಯ ಮೂಲಕ ಹಾದುಹೋಗುವಾಗ ಸಿಗುವ ತ್ರಿಕನಾಡ್ ಪ್ರದೇಶವು ಮುಸ್ಸಂಜೆಯ ಸಮಯದಲ್ಲಿ ಸೂರ್ಯ ಮುಳುಗುತ್ತಿದಂತೆ ಕಡು ಕತ್ತಲು ಸುತ್ತಲೂ ಮೂಡುತ್ತದೆ .
ತ್ರಿಕನಾಡ್ ತ್ರಯಂಬಕೇಶ್ವರ ದೇವಾಲಯದ ಸಮೀಪವೇ ಇರುವ ಪ್ರದೇಶವು ಭಯಂಕರ ಕತ್ತಲೆಯಲ್ಲಿ ರಾತ್ರಿ ಕಳೆಯುವಂತೆ ಮಾಡುತ್ತದೆ . ಯಾಕೆಂದರೆ ಇಲ್ಲಿ ಕತ್ತಲನ್ನು ದೂರ ಮಾಡುವ ಬೀದಿ ದೀಪ ಇರದೇ ಇರುವುದು ಆ ಊರಿನ ಭಯಾನಕ ಚಿತ್ರಣವನ್ನು ಕಾಣಿಸುತ್ತದೆ .
ಸ್ಥಳೀಯರು ಈ ಸನ್ನಿವೇಶದಿಂದ ಕರಾಳ ರಾತ್ರಿಯನ್ನು ಕಳೆಯುವಂತೆ ಮಾಡುತ್ತಿದೆ . ಈ ಹಾದಿಯ ಮೂಲಕ ದಾಟುವ ಪಾದಚಾರಿಗಳಿಗಂತೂ ಈ ಕತ್ತಲೆ ಯಮ ರೂಪದ ಸ್ವರೂಪವೇ ಆಗಿದೆ . ಕೂಡಲೇ ತ್ರಿಕನಾಡ್ ಭಾಗದಲ್ಲಿ ಬೀದಿ ದೀಪವನ್ನು ಅಳವಡಿಸಿ ಮುಂದೆ ಉಂಟಾಗಬಹುದಾದ ಅಜಾರು ಕಥೆಯನ್ನು ತಡೆಯಬೇಕು . ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನವನ್ನು ಹರಿಸಬೇಕು