ಅಭಿವೃದ್ಧಿ ಬಿಟ್ಟಿಯಾಗಿ ಪಡೆದು ದೇಶ ನಾಶ ಮಾಡಬೇಡಿ -ಆದರ್ಶ ಬಿ .ಎಂ

ಕಾಸರಗೋಡು:ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಗುತ್ತಿರುವಾಗ ಇದು ನಮ್ಮ ಸಾಧನೆ ಎಂದ ಎಡರಂಗ ಸರಕಾರ, pwd ಸಚಿವ ರಿಯಾಜ್, ಕಾಸರಗೋಡು ಸಂಸದ ಉಣ್ಣಿತನ್, ಮಂಜೇಶ್ವರ, ಕಾಸರಗೋಡು ಶಾಸಕರು ಗಳು ರಸ್ತೆಯಲ್ಲಿ ನಿಂತು ಫೋಟೋ ತೇಗದದ್ದೇ ತೆಗೆದದ್ದು, ಬಿಜೆಪಿ ಜಿಲ್ಲಾ ಸಮಿತಿಯ ಪ್ರಯತ್ನ ದ ಫಲವಾಗಿ ಕೆಲವು ಕಡೆ ಅಂಡರ್ ಪಾಸ್, ಫುಟ್ ಓವರ್ ಬ್ರಿಡ್ಜ್, ಲಭಿಸಿದಾಗ ಅದು ನಮ್ಮ ಸಾಧನೆ ಎಂದು ಬಿಂಬಿಸಲು ಫ್ಲೆಕ್ಸ್ ಹಾಕಿಸಿದ ಶಾಸಕರುಗಳು
ಈಗ ಕುಂಬ್ಳೆ ಯಲ್ಲಿ ತಾತ್ಕಾಲಿಕ ಟೋಲ್ ಬರುತ್ತೆ ಅಂತ ರಸ್ತೆ ತಡೆ ನಿರ್ಮಿಸಿ, ಆಸ್ತಿಗಳನ್ನು ನಾಶ ಮಾಡಿ, ಹೋರಾಟಕ್ಕೆ ನೇತೃತ್ವ ನೀಡುವ ನಾಟಕ ಮಾಡುವ ಶಾಸಕ, ಸಂಸದರೆ ಸತ್ಯ ಹೇಳಿ ಕುಂಬಳೆಯಲ್ಲಿ ತಾತ್ಕಾಲಿಕ ಟೋಲ್ ನಿರ್ಮಾಣ ಆಗುವ ವಿಚಾರ ನಿಮಗೆ ಗೊತ್ತೇ ಇಲ್ಲವೇ? ಇಲ್ಲ ಅಂತ ಅಂದ್ರೆ ನೀವು ನಿಮ್ಮ ಶಾಸಕ, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುವುದು ಒಳಿತು. ತಮ್ಮ ಸಾಧನೆ ಈ ಹೆದ್ದಾರಿ ಎನ್ನುತಿದ್ದವರ ನಾಟಕ ಈಗ ಬಯಲಾಗಿದೆ.


ಈಗ ಅವರೇ ಜನತೆಗೆ ತಿಳಿಸುತ್ತಿದ್ದಾರೆ ಹೆದ್ದಾರಿ ಕೇಂದ್ರ ಸರಕಾರ ದ ಯೋಜನೆ ನಮಗೇನು ಮಾಡಲು ಸಾಧ್ಯವಿಲ್ಲ, ಕೇಂದ್ರ ಸರಕಾರ ವಂಚನೆ ಮಾಡುತ್ತಿದೆ ಎಂದು.ಈಗಲಾದರೂ ಸತ್ಯ ಹೇಳಿದ್ದೀರಿ ಅಲ್ವ?… NH ಕೇಂದ್ರದ್ದು ಅಂತ 😃.

ಮಾನ್ಯ ಮಂಜೇಶ್ವರ ಶಾಸಕರೆ ವಿಧಾನ ಸಭೆಯಲ್ಲಿ ಮಂಜೇಶ್ವರ ದ ಸಮಸ್ಯೆ ಗಳ ಬಗ್ಗೆ ಮಾತನಾಡದೆ ಮಾತನಾಡಲು ಸಿಗುವ ಸಮಯದಲ್ಲಿ RSS ಗೆ ಬೈದು ಏನು ಪ್ರಯೋಜನ ವಿಲ್ಲ.ಮಂಜೇಶ್ವರ ಸಮಸ್ಯೆ ಗಳನ್ನ ಮಂತ್ರಿಗಳ ಮುಂದೆ ಚರ್ಚಿಸಿ ಪರಿಹಾರ ಕಾಣದೆ ತಾವೇ ಈಗ ಮಂಜೇಶ್ವರಕ್ಕೆ ಅವಮಾನ ಮಾಡುತ್ತಿದ್ದೀರಿ.

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೀoಜ, ಕಂಗುಮೆ, ಮಜಿಬೈಲ್ ಎಂಬಲ್ಲಿ ನಿಮ್ಮ ಅದೀನದಲ್ಲಿ ಬರುವ PWD ರಸ್ತೆ ಅರ್ಧ ನಾಶವಾಗಿ ಅಪಾಯದ ಸ್ಥಿತಿಯಲ್ಲಿ 4 ತಿಂಗಳಿಂದ ಅಪಘಾತ ವಲಯವಾಗಿದೆ. ಒಂದು ಸಣ್ಣ ರಿಪೇರಿನೇ ಮಾಡಲಾಗದ ಶಾಸಕರು, pwd ಮಂತ್ರಿ ರಿಯಾಜ್ ಯಾವ ಪುರುಷರ್ಥಕ್ಕೆ ಅಧಿಕಾರದಲ್ಲಿ ಇರಬೇಕು.ಶಾಸಕರೇ ಸಾದ್ಯವಾದರೆ ಒಮ್ಮೆ ಬಾಯರ್, ಕನಿಯಲ ಬಾಯರ್-ಧರ್ಮತಡ್ಕ ರಸ್ತೆ,ಗಳಲ್ಲಿ ಒಮ್ಮೆ ಸಂಚರಿಸಿ. ಶೋಚನೀಯ ಅವಸ್ಥೆ ಪರಿಹರಿಸಿ ಟೋಲ್ ಸ್ಥಳೀಯ ಪಂಚಾಯತ್ ಗಳಿಗೆ free ಆಗಿರುತ್ತದೆ,ನಿತ್ಯ ಸಂಚಾರ ಮಾಡೋರಿಗೆ ತಿಂಗಳ ಪಾಸ್ ಇರುತ್ತದೆ. ಟೋಲ್ ನೀಡದೆ ನಿಮಗೆ ಸಂಚಾರಿಸಬೇಕಾದರೆ ನಿಮಗೆ ಮಲ್ನಾಡ್ ಹೈವೇ ಇದೆ, ಗ್ರಾಮ ಸಡಕ್ ರಸ್ತೆಗಳು ಇವೆ….ಅಭಿವೃದ್ಧಿ ಯನ್ನು ಬಿಟ್ಟಿಯಾಗಿ ಪಡೆದು ಭಾರತವನ್ನು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮಾಡಬೇಡಿ.

✍🏻✍🏻ಆದರ್ಶ ಬಿ .ಎಂ

SHARE
Loading spinner

Leave a Reply

Your email address will not be published. Required fields are marked *

error: Content is protected !!