ಕೇರಳ ರಾಜ್ಯ – ಕಾಸರಗೋಡು ಜಿಲ್ಲಾ ಕನ್ನಡ ಸಂಘಟನೆಗಳ ವಿಳಾಸದ ಡೈರೆಕ್ಟರಿ ಪ್ರಕಟಣೆ.

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ , ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲಾ ಕನ್ನಡ ಸಂಘಟನೆಗಳ ವಿಳಾಸದ ಡೈರೆಕ್ಟರಿಯ 2ನೇ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಕೇರಳ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸುಮಾರು 400 ರಷ್ಟು ಕನ್ನಡ ಸಂಘ ಸಂಸ್ಥೆಗಳು ಮತ್ತು ಇತರ ಉಪಭಾಷೆಯ ಸಾಹಿತ್ಯಿಕ, ಸಾಂಸ್ಕೃತಿಕ,ಸಾಮಾಜಿಕ, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ , ಸ್ವಯಂಸೇವಾ ಸಂಘ ಸಂಸ್ಥೆಗಳು,ಸುಮಾರು 400 ರಷ್ಟು ಭಜನಾ ಸಂಘ, ಭಜನಾ ಮಂಡಳಿ, ಭಜನಾ ಮಂದಿರಗಳು, ಮತ್ತು ಸುಮಾರು 200ರಷ್ಟು ಕೇರಳ ಸರಕಾರದ ಕನ್ನಡ ಶಾಲಾ ಕಾಲೇಜುಗಳು ಖಾಸಗಿ ಕನ್ನಡ ಶಾಲಾ ಕಾಲೇಜುಗಳ ಹೆಸರು, ಪೂರ್ಣ ವಿಳಾಸ,ದೂರವಾಣಿ, ಮೊಬೈಲ್ ವಾಟ್ಸಾಪ್ ಸಂಖ್ಯೆ, ಇ-ಮೇಲ್, ಸ್ಥಾಪನೆಯಾದ ವರ್ಷ, ನೋಂದಣಿ ಸಂಖ್ಯೆ ಇತರ ಚುಟುಕು ಮಾಹಿತಿಯೊಂದಿಗೆ ಸಂಕ್ಷಿಪ್ತ ವಿವರಗಳು ಮತ್ತು ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಹಾಗೂ ಪದಾಧಿಕಾರಿಗಳ ಹೆಸರು,ಮನೆ ವಿಳಾಸಗಳನ್ನು ಲೆಟರ್ ಹೆಡ್ ನಲ್ಲಿ ಪ್ರತ್ಯೇಕವಾಗಿ ಬರೆದು 2025 ದಶಂಬರ್ 30 ರ ಮುಂಚಿತವಾಗಿ ಅಂಚೆ ಮೂಲಕ ಕಳುಹಿಸಲು ವಿನಂತಿಸಲಾಗಿದೆ.


ಸಂಪರ್ಕ ವಿಳಾಸ:- ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ,
ಕನ್ನಡ ಗ್ರಾಮ ರಸ್ತೆ
ಕಾಸರಗೋಡು -671121
ಮೊಬೈಲ್ :-9448572016,
9901951965
ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಕನ್ನಡ ಸಾಹಿತ್ಯಾ ಸಕ್ತರ ವಿಳಾಸ ಕಳುಹಿಸಲು ವಿನಂತಿ
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಕಾರದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ನಡೆಯುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮ ದಿನಾಚರಣೆ ಮತ್ತು ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಅಂಚೆ ಮೂಲಕ ಕಳುಹಿಸಲು ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಸಂಘಟನೆಗಳು ಮತ್ತು ಕಲಾವಿದರು,ಲೇಖಕರು, ಸಾಹಿತಿಗಳು, ಕವಿಗಳು, ಮಾಧ್ಯಮದವರು, ಸಾಮಾಜಿಕ ಜಾಲತಾಣಗಳ ಅಡ್ಮಿನ್ ಗಳು ಸಾಹಿತ್ಯಾಸಕ್ತರ ಹೆಸರು,ವಿಳಾಸ, ಮೊಬೈಲ್, ವಾಟ್ಸ್ ಪ್ ಸಂಖ್ಯೆಯನ್ನು ಅಂಚೆ ಕಾರ್ಡ್ ಅಥವಾ ಸಾಮಾನ್ಯ ಅಂಚೆಯ ಮೂಲಕ ಬರೆದು ಕಳುಹಿಸಲು ವಿನಂತಿಸಲಾಗಿದೆ.


ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ , (ರಿ ),ಕನ್ನಡ ಗ್ರಾಮ,
ಕನ್ನಡ ಗ್ರಾಮ ರಸ್ತೆ
ಕಾಸರಗೋಡು -671121
ಮೊಬೈಲ್ :-9448572016,
9901951965
ಅಥವಾ ವಾಟ್ಸ್ ಪ್ ಮೂಲಕ ಈ ವಿಳಾಸಕ್ಕೆ ಕಳುಹಿಸಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!