ಮಂಜೇಶ್ವರದ ಹೊಸಂಗಡಿಯಲ್ಲಿ ಲಾಟರಿ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿರುವ ದಿವ್ಯಾಂಗಿ ರೋಹಿತ್ ಹೊಸಂಗಡಿ ಯವರಿಗೆ ಲಂಚುಲಾಲ್ ಅವರು ತಮ್ಮ ಪ್ರಾಣಾಸ್ತ್ರ ಚಾರಿಟೇಬಲ್ ಟ್ರಸ್ಟ್ ಮೂಲಕ ದ್ವಿಚಕ್ರ ವಾಹನವನ್ನು ಕನಿಲ ಶ್ರೀ ಭಗವತಿ ಕ್ಷೇತ್ರದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಕಾರ್ನವರ ಮೂಲಕ ನೀಡಿದರು.
ಮಂಜೇಶ್ವರ ಪಿಲಿಗೊಬ್ಬು ನಡೆಯುವ ಸಂದರ್ಭದಲ್ಲಿ ರೋಹಿತ್ ಅವರ ಬಗ್ಗೆ ಲಂಚುಲಾಲ್ ಅವರಿಗೆ ತಿಳಿಸಲಾಗಿತ್ತು. ಅಂದೇ ನೀಡಿದ ವಾಗ್ದಾನದಂತೆ ಇಂದು ಈ ದ್ವಿಚಕ್ರ ವಾಹನವನ್ನು ಹಸ್ತಾಂತರಿಸಲಾಗಿದೆ. ಮಂಜೇಶ್ವರ ಪಿಲಿಗೊಬ್ಬು ವೇದಿಕೆಯಲ್ಲಿ ಸಾಂಕೇತಿಕವಾಗಿ ವಾಹನ ಕೀಲಿಯನ್ನು ಹಸ್ತಾಂತರಿಸಲಾಗಿತ್ತು .
ರೋಹಿತ್ ಅವರು ಹೊಸಂಗಡಿಯಲ್ಲಿ ಚಿಕ್ಕದೊಂದು ಗೂಡಂಗಡಿಯಲ್ಲಿ ಲಾಟರಿ ಮಾರಾಟ ಮಾಡುತ್ತಿದ್ದು ದಿನವೂ ಮನೆ ಮತ್ತು ಅಂಗಡಿಗೆ ಸಂಚರಿಸಲು ಬಾಡಿಗೆ ಆಟೋ ವನ್ನು ಆಶ್ರಯಿಸಬೇಕಾಗಿತ್ತು . ಲಂಚು ಲಾಲ್ ನೀಡಿರುವ ಈ ಕೊಡುಗೆ ಅವರ ಪಾಲಿಗೆ ದೊಡ್ಡ ವರವಾಗಿದೆ.ಇವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.