ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳ್ಳೂರಿನ ವಾರ್ಷಿಕ ಮಹೋತ್ಸವವು 13-12-2025 (ಶನಿವಾರ) ರಿಂದ 14-12-2025 (ಆದಿತ್ಯವಾರ)ದ ವರೆಗೆ ದಡ್ಡಂಗಡಿ ವೇದಮೂರ್ತಿ ಬಾಲಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ, ಕೊಂಡೆವೂರು ಮಠ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜರಗಲಿದೆ.
ಈ ಸಂದರ್ಭದಲ್ಲಿ 13ನೇ ವರ್ಷದ ಏಕಾಹ ಭಜನೆ, 36ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ಬಯಲಾಟ ಸೇರಿದಂತೆ ವಿವಿಧ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.