ಮಂಜೇಶ್ವರ : ಕುಂಬಳೆ ಜಿ.ಎಸ್.ಬಿ.ಎಸ್. ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಬಹುಮಹಡಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಣ ಸಚಿವರು ಭಾಗವಹಿಸುತ್ತಿದ್ದ ವೇಳೆ, ವೇದಿಕೆಯ ಸಮೀಪ ಗದ್ದಲ ಉಂಟುಮಾಡಿ ಪ್ರವೇಶ ದ್ವಾರವನ್ನು ತಡೆದ ಆರೋಪದ ಮೇಲೆ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಸೇರಿದಂತೆ 10 ಜನರ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಾಗಿದೆ.

ಎಸ್.ಐ. ಕೆ.ಪಿ. ಗಣೇಶ್ ಅವರ ದೂರಿನ ಮೇರೆಗೆ ಎಂ.ಎಲ್. ಅಶ್ವಿನಿ ಹಾಗೂ ಇತರ ಪ್ರಮುಖರಾದ ಅಶ್ವಿನ್ ಅಜಿತ್ ಕುಮಾರ್, ಪಿ.ಆರ್. ಸುನಿಲ್ (40), ಸಂದೀಪ್ (40), ವಿಕ್ರಮ್ ಸೇರಿದಂತೆ ಒಟ್ಟು 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೋಮವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಶಿಕ್ಷಣ ಸಚಿವರ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಲಾಗಿದ್ದ ವೇದಿಕೆಯ ಪ್ರವೇಶ ದ್ವಾರದ ಗೇಟಿನ ಬಳಿಗೆ ಕುಂಬಳ ಕಡೆಯಿಂದ ಮೆರವಣಿಗೆಯಾಗಿ ಬಂದ ಪ್ರತಿಭಟನಾಕಾರರು ಪ್ರವೇಶಕ್ಕೆ ತಡೆ ಒಡ್ಡಿದ್ದಾರೆ ಎಂದು ಕುಂಬಳೆ ಪೊಲೀಸರು ದಾಖಲಿಸಿರುವ ಎಫ್.ಐ.ಆರ್ನಲ್ಲಿ ತಿಳಿಸಲಾಗಿದೆ.

