ಮಂಜೇಶ್ವರ: ಕೇರಳ ವ್ಯಾಪಾರಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ನೇತೃತ್ವದಲ್ಲಿ ಹೊಸಂಗಡಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ಮಂಜೇಶ್ವರ ಹೊಸಂಗಡಿ ರೈಲ್ವೆ ಸೇತುವೆ ಸಮೀಪ ಧರಣಿ ಪ್ರತಿಭಟನೆ ನಡೆಸಲಾಯಿತು.


ಕಾರ್ಯಕ್ರಮದ ಸ್ವಾಗತವನ್ನು ಮಂಜೇಶ್ವರ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎ. ಅಬ್ದುಲ್ ಹಮೀದ್ ನೆರವೇರಿಸಿದರು. ಬಶೀರ್ ಕನಿಲ ಅವರು ಪ್ರತಿಭಟನೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸತ್ಯಜೋತ್, ಹಸೈನಾರ್, ಹನೀಫ್ ಪೊಸೋಟ್, ಅಬ್ದು ಹಾಜಿ ಕಡಂಬಾರ್, ಗಾಯತ್ರಿ ಟೀಚರ್, ಇಸಾಕ್, ಹಮೀರ್, ಅಶ್ರಫ್, ಸಿದ್ದೀಕ್, ಮುಹ್ಸಿನ್, ಖಲೀಲ್, ಮೂಸ ಸೇರಿದಂತೆ ಹೊಸಂಗಡಿಯ ಆಟೋ ಚಾಲಕರು ಹಾಗೂ ಇತರರು ಭಾಗವಹಿಸಿದ್ದರು.

ಹೊಸಂಗಡಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ಪಾಲಕ್ಕಾಡ್ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸಲ್ಲಿಸಲು ಸಹಿ ಸಂಗ್ರಹ ಅಭಿಯಾನ ಕೂಡ ನಡೆಸಲಾಯಿತು.

